ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕೊಲ್ಲಂ ಜಿಲ್ಲೆಯಲ್ಲಿ ಸುನಾಮಿ': ಸುಳ್ಳು ಸುದ್ದಿ ನಂಬಬೇಡಿ

Last Updated 13 ಆಗಸ್ಟ್ 2019, 13:43 IST
ಅಕ್ಷರ ಗಾತ್ರ

ಕೊಲ್ಲಂ: ಕೇರಳದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜನರು ಒಗ್ಗಟ್ಟಾಗಿ ಪ್ರಯತ್ನಿಸುತ್ತಿರುವಾಗ ಕೆಲವು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿಸಿ ಭಯವನ್ನುಂಟು ಮಾಡುತ್ತಿದ್ದಾರೆ.ಕೊಲ್ಲಂ ಜಿಲ್ಲೆಯಲ್ಲಿ ಸುನಾಮಿ ಸಾಧ್ಯತೆ ಇದೆ ಎಂಬ ಸುಳ್ಳು ಸುದ್ದಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಇದನ್ನು ನಂಬಬೇಡಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಪಿ.ಆರ್.ಡಿ, ಫಿಶರೀಸ್ಮೊದಲಾದ ಇಲಾಖೆಗಳುಕೊಲ್ಲಂನಲ್ಲಿ ಸುನಾಮಿ ಸಾಧ್ಯತೆ ಇದೆ ಎಂದುಹೇಳಿರುವ ದನಿ ಸಂದೇಶವೊಂದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ,. ಇಡೀ ರಾಜ್ಯವೇ ಕಷ್ಟ ಅನುಭವಿಸುತ್ತಿರುವಾಗ ಹೆದರಿಕೆ ಹುಟ್ಟಿಸುವ ಫೇಕ್ಸಂದೇಶಗಳ ಬಗ್ಗೆ ಜಾಗೃತರಾಗಿರಿ ಎಂದು ಕೊಲ್ಲಂ ಜಿಲ್ಲಾಧಿಕಾರಿ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.

ಸುಳ್ಳು ಸುದ್ದಿ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದು, ಜಿಲ್ಲಾಧಿಕಾರಿ ಕೊಲ್ಲಂಮತ್ತು PRD Kollam ಈ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಕಟವಾಗುವ ಪೋಸ್ಟ್‌ಗಳನ್ನು ಮಾತ್ರ ನಂಬಿದರೆ ಸಾಕು ಎಂದಿದ್ದಾರೆ.

ಕೇರಳದಲ್ಲಿ ಮುಂದುವರಿದ ಮಳೆ: 8 ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ನಾಳೆ ರಜೆ
ಕೊಚ್ಚಿ/ ಕೋಯಿಕ್ಕೋಡ್: ಎರ್ನಾಕುಳಂ, ತ್ರಿಶ್ಶೂರ್, ಕೋಯಿಕ್ಕೋಡ್, ಮಲಪ್ಪುರಂ, ವಯನಾಡ್, ಕಣ್ಣೂರು,ಇಡುಕ್ಕಿಮತ್ತು ಕೋಟ್ಟಯಂ ಜಿಲ್ಲೆಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆಬುಧವಾರ ರಜೆ ಘೋಷಿಸಲಾಗಿದೆ.

ಎರ್ನಾಕುಳಂ ಜಿಲ್ಲೆಯಲ್ಲಿ yellow ಅಲರ್ಟ್ ಘೋಷಿಸಿದ್ದರೂ ಮಳೆ ತೀವ್ರವಾಗುವ ಸಾಧ್ಯತೆ ಇರುವುದರಿಂದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಸುಹಾಸ್ ಹೇಳಿದ್ದಾರೆ.

ಕೋಯಿಕ್ಕೋಡ್ ವೃತ್ತಿ ಶಿಕ್ಷಣ ಕಾಲೇಜು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಇಲ್ಲಿ ರೆಡ್ ಅಲರ್ಟ್ ಇದ್ದು, ಹಲವಾರು ಶಾಲಾ ಕಾಲೇಜುಗಳನ್ನು ಪುನರ್ವಸತಿ ಕೇಂದ್ರಗಳನ್ನಾಗಿ ಮಾಡಲಾಗಿದೆ.

ವಯನಾಡ್ ಜಿಲ್ಲೆಯ ಹಲವಾರು ಭಾಗಗಳಲ್ಲಿ ನೀರು ತಂಗಿದ್ದು ಇಲ್ಲಿ ಆರೆಂಜ್ ಅಲೆರ್ಟ್ ಘೋಷಿಸಲಾಗಿದೆ. ದುರಂತ ಸಾಧ್ಯತೆಗಳಿರುವುದರಿಂದ ಇಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.ಯುನಿವರ್ಸಿಟಿ ಮತ್ತು ಇತರ ಪರೀಕ್ಷೆಗಳು ಇರುವುದಿಲ್ಲ. ಅದೇ ವೇಳೆ ಮಾಡೆಲ್ ರೆಸಿಡೆನ್ಶಿಯಲ್ ಶಾಲೆಗಳಿಗೆ ರಜೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಮಲಪ್ಪುರಂ ಜಿಲ್ಲೆಯಲ್ಲಿ ರೆಡ್ ಅಲೆರ್ಟ್ ಘೋಷಿಸಿದ್ದು, ನೆರೆ ಸಂತ್ರಸ್ತರಿಗಾಗಿ ಸಹಾಯ ಮತ್ತು ರಕ್ಷಣಾ ಕಾರ್ಯಗಳು ಬಿರುಸಿನಿಂದ ನಡೆಯುತ್ತಿವೆ.ಅಂಗನವಾಡಿ, ಮದರಸ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

ಕಣ್ಣೂರು ಮತ್ತು ಕೋಟ್ಟಯಂ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ರಜೆ ಇರುತ್ತದೆ.

ಬೈಕ್‌ನಲ್ಲಿ ಕುಳಿತ ಸ್ಥಿತಿಯಲ್ಲಿ ಪ್ರಿಯದರ್ಶನ್ ಮೃತದೇಹ ಪತ್ತೆ
ನಿಲಂಬೂರ್: ಮಲಪ್ಪುರಂ ಜಿಲ್ಲೆಯ ಕವಳಪ್ಪಾರದಲ್ಲುಂಟಾದ ಭೂಕುಸಿತದಲ್ಲಿ ಕಣ್ಮರೆಯಾಗಿದ್ದ ಪ್ರಿಯದರ್ಶನ್ ಎಂಬ ಯುವಕನ ಮೃತದೇಹ ಪತ್ತೆಯಾಗಿದೆ.ಮನೆಯ ಮುಂಭಾಗದಲ್ಲಿ ಬೈಕ್ ಮೇಲೆ ರೈನ್‌ಕೋಟ್ ಧರಿಸಿ ಕುಳಿತ ಸ್ಥಿತಿಯಲ್ಲಿ ಪ್ರಿಯದರ್ಶನ್ ಮೃತದೇಹ ಪತ್ತೆಯಾಗಿದೆ ಎಂದು ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.

ಅಮ್ಮನನ್ನು ಹೋಗಿ ಭೇಟಿ ಮಾಡಿ ಬರುತ್ತೇವೆ ಎಂದು ಮನೆಯಿಂದ ಅಂಗಳಕ್ಕಿಳಿದು ಬೈಕ್ ಸ್ಟಾರ್ಟ್ ಮಾಡುವ ಹೊತ್ತಲ್ಲಿ ಭೂಕುಸಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಕವಳಪ್ಪಾರ ಭೂಕುಸಿತ ಬಗ್ಗೆ ಕೇಳುವಾಗಲೇ ಭಯವುಂಟಾಗುತ್ತದೆ ಎಂದು ಅಲ್ಲಿನ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT