ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ವೀಕರಿಸಿದಿರಿ? ಕೇರಳದ ಸಂಸದರನ್ನು ಗದರಿದ ಸೋನಿಯಾ

ಮಂಗಳವಾರ, ಜೂಲೈ 16, 2019
23 °C

ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ವೀಕರಿಸಿದಿರಿ? ಕೇರಳದ ಸಂಸದರನ್ನು ಗದರಿದ ಸೋನಿಯಾ

Published:
Updated:

ನವದೆಹಲಿ: 17ನೇ ಲೋಕಸಭೆಯ ಅಧಿವೇಶನವು ಸಂಸದರ ಪ್ರಮಾಣ ವಚನ ಸ್ವೀಕಾರದೊಂದಿಗೆ ಸೋಮವಾರ ಅಧಿಕೃತವಾಗಿ ಆರಂಭವಾಗಿದೆ. ಈ ವೇಳೆ ಕೇರಳದ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನು ಬಿಜೆಪಿ ಸಂಸದರು ಡೆಸ್ಕ್‌ಗೆ ಕುಟ್ಟುತ್ತಾ ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಂತರ ಸುರೇಶ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು.

ಆದರೆ ಹಿಂದಿಯಲ್ಲಿ ಯಾಕೆ ಪ್ರಮಾಣ ವಚನ ಸ್ನೀಕರಿಸಿದಿರಿ? ನಿಮ್ಮ ಮಾತೃಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಬೇಕಿತ್ತು ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸುನಿಲ್ ಅವರನ್ನು ಗದರಿದ್ದಾರೆ.

ಇದಾದನಂತರ ಕೇರಳದ ಕಾಂಗ್ರೆಸ್ ಸಂಸದರಾದ ರಾಜಮೋಹನ್ ಉಣ್ಣಿತ್ತಾನ್ ಮತ್ತು ವಿ.ಕೆ. ಶ್ರೀಕಂಠನ್  ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ನಿರ್ಧಾರದಿಂದ ಹಿಂದೆ ಸರಿದರು ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಸಂಸತ್‌ನಲ್ಲಿ ‘ರಾಹುಲ್‌ ಎಲ್ಲಿ?’ ಎಂಬ ಗುಸುಗುಸು ಚರ್ಚೆ: ಟ್ವೀಟ್‌ನೊಂದಿಗೆ ತೆರೆ

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !