ಮಂಗಳವಾರ, ಆಗಸ್ಟ್ 20, 2019
25 °C

ಮಮತಾ ಬ್ಯಾನರ್ಜಿ ಚಿತ್ರ ತಿರುಚಿದ್ದ ಪ್ರಿಯಾಂಕಾಗೆ ಜಾಮೀನು

Published:
Updated:
Prajavani

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚಿತ್ರವನ್ನು ‘ಅವಹೇಳನಕಾರಿ’ಯಾಗಿ ತಿರುಚಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದೆ. 

ಬಿಡುಗಡೆಯಾದ ತಕ್ಷಣವೇ ‘ಲಿಖಿತ ಕ್ಷಮಾಪಣೆ’ ಕೇಳಬೇಕು. ಇತರರ ಹಕ್ಕುಗಳಿಗೆ ಧಕ್ಕೆಯಾಗುವಲ್ಲಿಗೆ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಕೊನೆಗೊಳ್ಳುತ್ತದೆ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಸಂಜೀವ್‌ ಖನ್ನಾ ಅವರಿದ್ದ ಪೀಠವು ಹೇಳಿದೆ. 

ಕ್ಷಮೆ ಕೇಳುವುದು ಜಾಮೀನಿನ ಷರತ್ತು ಎಂದು ಪೀಠವು ಮೊದಲು ಹೇಳಿತು. ಬಳಿಕ, ಇದು ಜಾಮೀನಿನ ಷರತ್ತು ಅಲ್ಲ, ಆದರೆ, ಬಿಡುಗಡೆಯಾದ ಬಳಿಕ ಅವರು ತಕ್ಷಣವೇ ಕ್ಷಮೆ ಕೇಳಬೇಕು ಎಂದು ಸ್ಪಷ್ಟಪಡಿಸಿತು.

ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ ಒಂದನ್ನು ಹಂಚಿಕೊಂಡವರನ್ನು ಬಂಧಿಸಲು ಅವಕಾಶ ಇದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪೀಠವು ಸೂಚಿಸಿದೆ. ಇದೇ 10ರಂದು ಪ್ರಿಯಾಂಕಾ ಅವರನ್ನು ಬಂಧಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ  ಒಳಪಡಿಸಲಾಗಿತ್ತು.

Post Comments (+)