ಮಂಗಳವಾರ, ಸೆಪ್ಟೆಂಬರ್ 17, 2019
21 °C

ರಾಜಕೀಯ ನಾಯಕರ ನುಡಿ–ಕಿಡಿ

Published:
Updated:
Prajavani

1954ರಲ್ಲಿ ಟಿಬೆಟ್ ಅನ್ನು ಚೀನಾಕ್ಕೆ ಹಸ್ತಾಂತರಿಸುವ ಒಪ್ಪಂದಕ್ಕೆ ನೆಹರು ಸಹಿ ಮಾಡಿದರು ಎಂದು ಟೀಕಿಸಲಾಗುತ್ತಿದೆ. ಆದರೆ, ಟಿಬೆಟ್ ಅನ್ನು ನಾಲ್ಕು ಭಾಗಗಳಾಗಿ ವಿಭಜಿಸಿ, ಅವುಗಳಲ್ಲಿ ಮೂರನ್ನು ಚೀನಾ ಜತೆ ವಿಲೀನ ಮಾಡುವ ಒಪ್ಪಂದಕ್ಕೆ ವಾಜಪೇಯಿ ಸಹಿ ಮಾಡಿದ್ದರು ಎಂಬುದನ್ನು ಮರೆಯಬಾರದು

-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

ಭಾರತದ ಕಾಯಂ ಸದಸ್ಯತ್ವವನ್ನು ನೆಹರು ಅವರು ಚೀನಾಕ್ಕೆ ಬಿಟ್ಟುಕೊಟ್ಟಿರಲಿಲ್ಲ. ವಿಶ್ವಸಂಸ್ಥೆ ರಚನೆಯಾದ 1945ರಿಂದಲೇ ಭದ್ರತಾ ಮಂಡಳಿಯಲ್ಲಿ ಚೀನಾ ಕಾಯಂ ಸದಸ್ಯತ್ವ ಹೊಂದಿತ್ತು. ಬಿಜೆಪಿ ಸದಾ ಭೂತಕಾಲದ ವಿಷಯಗಳನ್ನಿಟ್ಟುಕೊಂಡೇ ಹೋರಾಡುತ್ತದೆ. ಏಕೆಂದರೆ ಅದು ವರ್ತಮಾನದಲ್ಲಿ ಸಂಪೂರ್ಣ ವಿಫಲವಾಗಿದೆ

-ಶಶಿ ತರೂರ್, ಕಾಂಗ್ರೆಸ್ ಸಂಸದ

 ಒಬ್ಬರು ರಾಜಕಾರಣದಲ್ಲಿ ವಿಫಲರಾಗಿದ್ದಾರೆ, ಮತ್ತೊಬ್ಬರು ಮೇಲೇಳುವ ಲಕ್ಷಣವೇ ಇಲ್ಲ. ಒಬ್ಬರಿಗಿಂತ ಇಬ್ಬರು ಲೇಸು ಎಂದು ಕಾಂಗ್ರೆಸ್‌ ನಂಬಿದಂತಿದೆ

(ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಗ್ಗೆ)

ಅರುಣ್‌ ಜೇಟ್ಲಿ, ಬಿಜೆಪಿ ಮುಖಂಡ

Post Comments (+)