ಶನಿವಾರ, ಜನವರಿ 25, 2020
22 °C

ಅತ್ಯಾಚಾರ ಪ್ರಕರಣಗಳು: ಶಿಕ್ಷೆಯಾಗುವ ಪ್ರಮಾಣವೇ ಕಡಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ದಾಖಲಾಗುವ ಎಲ್ಲಾ ಅತ್ಯಾಚಾರ ಪ್ರಕರಣಗಳಲ್ಲಿ, ಕೆಲವು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗುತ್ತಿದೆ. ಶೇ 70ರಷ್ಟು ಪ್ರಕರಣಗಳ ತನಿಖೆ ಮತ್ತು ವಿಚಾರಣೆಯೇ ಪೂರ್ಣಗೊಳ್ಳುವುದಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಈಚೆಗೆ ಬಿಡುಗಡೆ ಮಾಡಿದ, ‘ಭಾರತದಲ್ಲಿ ಅಪರಾಧ– 2017’ ವರದಿಯಲ್ಲಿ ಈ ಮಾಹಿತಿ ಇದೆ

* 1.46 ಲಕ್ಷ – 2017ರಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾದ ಅತ್ಯಾಚಾರ ಪ್ರಕರಣಗಳು

* 5,822 – ತೀರ್ಪು ಬಂದ ಪ್ರಕರಣಗಳು

* 95.4 % – 2013ರಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಪಟ್ಟಿ ದಾಖಲಾಗಿದ್ದ ಪ್ರಕರಣಗಳ ಪ್ರಮಾಣ

* 86.6 % – 2017ರಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಪಟ್ಟಿ ದಾಖಲಾಗಿದ್ದ ಪ್ರಕರಣಗಳ ಪ್ರಮಾಣ

 ಆಧಾರ: ಎನ್‌ಸಿಆರ್‌ಬಿ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು