ವಿತರಕರ ಕಮಿಷನ್‌ ಹೆಚ್ಚಳ: ಅಡುಗೆ ಅನಿಲ ಪ್ರತಿ ಸಿಲಿಂಡರ್‌ ಬೆಲೆ ₹2 ಏರಿಕೆ

7

ವಿತರಕರ ಕಮಿಷನ್‌ ಹೆಚ್ಚಳ: ಅಡುಗೆ ಅನಿಲ ಪ್ರತಿ ಸಿಲಿಂಡರ್‌ ಬೆಲೆ ₹2 ಏರಿಕೆ

Published:
Updated:

ನವದೆಹಲಿ: ಎಲ್‌ಪಿಜಿ ವಿತರಕರಿಗೆ ನೀಡುವ ಕಮಿಷನ್‌ ಅನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಇದರಿಂದಾಗಿ ಅಡುಗೆ ಅನಿಲದ ಪ್ರತಿ ಸಿಲಿಂಡರ್‌ನ ಬೆಲೆ ₹2 ಏರಿಕೆಯಾಗಿದೆ. 

ರಾಜ್ಯ ಮಾಲಿಕತ್ವದಲ್ಲಿನ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆಯಂತೆ ದೆಹಲಿಯಲ್ಲಿ 14.2 ಕೆ.ಜಿ. ತೂಕದ ಅಡುಗೆ ಅನಿಲ ಸಿಲಿಂಡ್‌ ದರ ₹505.34ರಿಂದ ₹507.42ಕ್ಕೆ ಏರಿಕೆಯಾಗಿದೆ. 

ಇಂಧ ಸಚಿವಾಲಯದ ಆದೇಶದನ್ವಯ ವಿತರಕರ ಕಮಿಷನ್‌ಅನ್ನು ಹೆಚ್ಚಿಸಲಾಗಿದೆ. 2017ರ ಸೆಪ್ಟೆಂಬರ್‌ನಲ್ಲಿ 14.2 ಕೆ.ಜಿ ಸಿಲಿಂಡರ್‌ ಮತ್ತು 5 ಕೆ.ಜಿ. ಸಿಲಿಂಡರ್‌ಗೆ ಸ್ಥಳೀಯ ವಿತರಕರಿಗೆ ಕ್ರಮವಾಗಿ ₹48.89 ಮತ್ತು ₹24.20 ಕಮಿಷನ್‌ ನಿಗದಿಪಡಿಸಲಾಗಿತ್ತು.

ಎಲ್‌ಪಿಜಿ ವಿತರಕರ ಸಾರಿಗೆ ವೆಚ್ಚ, ವೇತನ ಇತ್ಯಾದಿಗಳನ್ನು ಪರಿಷ್ಕರಿಸಿ ನೂತನ ಕಮಿಷನ್‌ ದರವನ್ನು ಜಾರಿಗೊಳಿಸಲಾಗಿದೆ‌. ಆಯೋಗದ ಮಧ್ಯಂತರ ಆದೇಶದಂತೆ 14.2 ಕೆ.ಜಿ ಸಿಲಿಂಡರ್‌ಗೆ ₹50.58 ಮತ್ತು 5 ಕೆ.ಜಿ ಸಿಲಿಂಡರ್‌ಗೆ ₹25.29 ನೂತನ ಕಮಿಷನ್‌ ದರವನ್ನು ನಿಗದಿ ಮಾಡಲಾಗಿದೆ ಎಂದು ಹೇಳಿದೆ.

ಪ್ರಸ್ತುತ ತಿಂಗಳಿನಲ್ಲಿ ಎರಡನೇ ಬಾರಿಗೆ ದರ ಹೆಚ್ಚಿಸಲಾಗಿದೆ. ನವೆಂಬರ್‌ 1ರಂದು ಏರಿಕೆ ಮಾಡಲಾಗಿತ್ತು. 
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !