ಸೋಮವಾರ, ಜನವರಿ 20, 2020
17 °C

₹ 6000 ಸಂಪಾದಿಸುವ ವ್ಯಕ್ತಿಗೆ ₹ 3 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್‌( ಮಧ್ಯ ಪ್ರದೇಶ): ತಿಂಗಳಿಗೆ ₹ 6000 ಸಂಪಾದಿಸುವ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ₹ 3 ಕೋಟಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ಜಾರಿ ಮಾಡಿದೆ.

ರವಿ ಗುಪ್ತ ಎನ್ನುವವರಿಗೆ ಆದಾಯ ತೆರಿಗೆ ಇಲಾಖೆಯಿಂದ ₹ 3.49 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ. ತಾನು ತಿಂಗಳಿಗೆ ₹ 6000 ದುಡಿಯುದಾಗಿ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

2011 ರಲ್ಲಿ ಪಾನ್ ಕಾರ್ಡ್‌ ಮತ್ತು ಫೋಟೋ ಬಳಸಿ ₹132 ಕೋಟಿ ಮೊತ್ತದ ವ್ಯವಹಾರ ನಡೆದಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ. ತಾನು ಯಾವುದೇ ಖಾತೆ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು