ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಅತಿದೊಡ್ಡ ಹನಿಟ್ರ್ಯಾಪ್, ಸುಲಿಗೆ ಜಾಲ ಪತ್ತೆ, ಪ್ರಭಾವಿಗಳ ವಿಚಾರಣೆ

ಸಿರಿವಂತರು, ರಾಜಕಾರಣಿಗಳು, ಅಧಿಕಾರಿಗಳೇ ಗುರಿ
Last Updated 26 ಸೆಪ್ಟೆಂಬರ್ 2019, 14:12 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದಲ್ಲಿ ಹೈಪ್ರೊಫೈಲ್ ಸುಲಿಗೆ ಜಾಲವನ್ನು ಭೇದಿಸಿರುವ ಪೊಲೀಸರು10ಕ್ಕೂ ಹೆಚ್ಚು ಅಧಿಕಾರಿಗಳು, 8 ಮಾಜಿ ಸಚಿವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ದಂಧೆಗೆ ಸಂಬಂಧಿಸಿದ 1 ಸಾವಿರ ವಿಡಿಯೊ, ಆಡಿಯೊ ಕ್ಲಿಪ್‌ಗಳು ಹಾಗೂ ಸಂಭಾಷಣೆಗಳು ಕಂಪ್ಯೂಟರ್ ಹಾಗೂ ಮೊಬೈಲ್‌ ಫೋನ್‌ಗಳಲ್ಲಿ ಪತ್ತೆಯಾಗಿವೆ.ಶ್ವೇತಾ ಜೈನ್, ಬರ್ಖಾ ಸೋನಿ, ಆರತಿ ದಯಾಳ್, ಹಾಗೂ ಒಬ್ಬ ಕಾರು ಚಾಲಕ ಬಂಧಿತರಲ್ಲಿ ಸೇರಿದ್ದಾರೆ.

ಅತಿದೊಡ್ಡ ಹನಿಟ್ರ್ಯಾಪ್‌ ಸಂಚುಇದಾಗಿದ್ದು, ಸಿರಿವಂತರು, ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಗುರಿಯಾಗಿಸಲಾಗಿತ್ತು. ಐವರು ಮಹಿಳೆಯರು ಇದರಲ್ಲಿ ಭಾಗಿಯಾಗಿದ್ದು, ಅವರು ತಮ್ಮ ಪ್ರತ್ಯೇಕ ಗ್ಯಾಂಗ್‌ಗಳನ್ನು ನಡೆಸುತ್ತಿದ್ದರು. ಲೈಂಗಿಕ ಕಾರ್ಯಕರ್ತೆಯರು ಹಾಗೂ ಕಾಲೇಜು ಯುವತಿಯರನ್ನು ಈ ಕೆಲಸಕ್ಕಾಗಿ ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಸೇರಿದರಾಜಕಾರಣಿಗಳುವಿಡಿಯೊ ತುಣುಕುಗಳಲ್ಲಿದ್ದಾರೆ ಎನ್ನಲಾಗಿದೆ.ಮಧ್ಯಪ್ರದೇಶದ ಆಚೆಗೂ ಜಾಲ ವ್ಯಾಪಿಸಿರುವ ಸಾಧ್ಯತೆ ಇದೆ ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವ ವಹಿಸಿರುವ ಸಂಜೀವ್ ಶಮಿ ಅವರು ಹೇಳಿದ್ದಾರೆ. ಪ್ರಭಾವಿ ವ್ಯಕ್ತಿಗಳನ್ನು ಬಲೆಗೆ ಬೀಳಿಸಿ, ಅವರು ಬಯಸಿದ್ದನ್ನು ಕೊಟ್ಟು, ಅವರಿಂದ ಮತ್ತೊಂದನ್ನು ವಿನಿಮಯ ರೂಪದಲ್ಲಿ ಪಡೆಯುವ (ಕ್ವಿಡ್ ಪ್ರೊ ಕ್ಯೂ) ಅತಿದೊಡ್ಡ ಲೈಂಗಿಕ ಹಗರಣ ಜಾಲ ಇದು ಎಂದ ಅವರು ಹೇಳಿದ್ದಾರೆ.

ಬೃಹತ್ ಸುಲಿಗೆ ಜಾಲ

*ಬಂಧಿತರ ಪೈಕಿ ಬರ್ಖಾ ಸೋನಿ ಅವರು ಕಾಂಗ್ರೆಸ್‌ನ ಐಟಿ ಘಟಕದ ಅಮಿತ್ ಸೋನಿ ಅವರ ಪತ್ನಿ

*ಸ್ಥಳೀಯ ಎನ್‌ಜಿಒ ಮುನ್ನಡೆಸುತ್ತಿರುವ, ಜಾಲದ ಪ್ರಮುಖ ವ್ಯಕ್ತಿ ಶ್ವೇತಾ ಜೈನ್ ಬಂಧನ, ವಿಚಾರಣೆ

*ಶ್ವೇತಾ ಮನೆಯಲ್ಲಿ ಸಾವಿರಕ್ಕೂ ಹೆಚ್ಚು ವಿಡಿಯೊ ಕ್ಲಿಪ್, ಹಣ ಸುಲಿಗೆ ದಾಖಲೆಯಿರುವ ಲ್ಯಾಪ್‌ಟಾಪ್, ಮೊಬೈಲ್, ದಾಖಲೆ ಜಪ್ತಿ

*ಅಶ್ಲೀಲ ವಿಡಿಯೊ ಆಧಾರದ ಮೇಲೆ ಹಿರಿಯ ಐಎಎಸ್ ಅಧಿಕಾರಿಗೆ ₹2 ಕೋಟಿಗೆ ಇತ್ತೀಚೆಗೆ ಬೇಡಿಕೆ ಇಡಲಾಗಿತ್ತು

*ಇಂದೋರ್ ಪುರಸಭೆ ಅಧಿಕಾರಿಯೊಬ್ಬರು ₹3 ಕೋಟಿಗೆ ಬೇಡಿಕೆಯಿಟ್ಟಿದ್ದ ಆರತಿ ದಯಾಳ್ ವಿರುದ್ಧ ದೂರು ನೀಡಿದ ಬಳಿಕ ಇಡೀ ಜಾಲ ಬೆಳಕಿಗೆ

*ಮೊದಲ ಕಂತು ₹50 ಲಕ್ಷ ಪಡೆಯಲು ಇಂದೋರ್‌ಗೆ ತೆರಳಿದ್ದ ಆರತಿ ಬಂಧನ; ಆರೋಪಿ ಹೇಳಿಕೆ ಆಧರಿಸಿ ಇತರರ ಸೆರೆ

*ಶ್ವೇತಾ ಜೈನ್, ಮಧ್ಯಪ್ರದೇಶದ ಮಾಜಿ ಸಚಿವರ ಮೂಲಕ ಮಹಾರಾಷ್ಟ್ರದ ರಾಜಕೀಯ ನಾಯಕರ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT