ಮುಂಬೈ:ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಿದೆ. ಈ ಹಿಂದಿನ ವಿಧಾನಸಭೆಯಲ್ಲಿ22 ಮಹಿಳಾ ಶಾಸಕಿಯರಿದ್ದರು. ಈ ಚುನಾವಣೆಯಲ್ಲಿ 24 ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ.
ಎಲ್ಲಾ ಪಕ್ಷಗಳೂ ಮಹಿಳೆಯರಿಗೆ ಟಿಕೆಟ್ ನೀಡಿದ್ದವು. ಆದರೆ ಒಟ್ಟು ಅಭ್ಯರ್ಥಿಗಳಿಗೆ ಹೋಲಿಸಿದರೆ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇತ್ತು. 288 ಸ್ಥಾನಗಳಿರುವ ವಿಧಾನಸಭೆಗೆ ಆಯ್ಕೆಯಾಗಿರುವ ಮಹಿಳಾ ಶಾಸಕಿಯರ ಪ್ರಮಾಣವೂ ಶೇ 10ಕ್ಕಿಂತ ಕಡಿಮೆ ಇದೆ.
ವಿವಿಧ ಪಕ್ಷಗಳಲ್ಲಿ ಮಹಿಳಾ ಶಾಸಕಿಯರು
12 ಬಿಜೆಪಿ ಶಾಸಕಿಯರು
2 ಶಿವಸೇನಾ ಶಾಸಕಿಯರು
5 ಕಾಂಗ್ರೆಸ್ ಶಾಸಕಿಯರು
3 ಎನ್‌ಸಿಪಿ ಶಾಸಕಿಯರು
2 ಪಕ್ಷೇತರ ಶಾಸಕಿಯರು
ಬಿಜೆಪಿಯಿಂದ 17, ಶಿವಸೇನಾದಿಂದ 8 ಮಹಿಳೆಯರು ಕಣದಲ್ಲಿದ್ದರು
ಕಾಂಗ್ರೆಸ್‌ನಿಂದ 14, ಎನ್‌ಸಿಪಿಯಿಂದ 3 ಮಹಿಳೆಯರು ಕಣದಲ್ಲಿದ್ದರು
3,237 ಅಭ್ಯರ್ಥಿಗಳ ಪೈಕಿ 235 ಮಹಿಳಾ ಅಭ್ಯರ್ಥಿಗಳಿದ್ದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.