ಭಾನುವಾರ, ಮೇ 16, 2021
22 °C

ಮಹಾರಾಷ್ಟ್ರ: ಬಿಜೆಪಿ ಸಂಭ್ರಮಾಚರಣೆಗೆ ಮುಂಬೈನಲ್ಲಿ 5000 ಲಾಡು

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದಲ್ಲಿ ಫಲಿತಾಂಶ ಘೋಷಣೆಗೆ ಮೊದಲೇ ಗೆಲುವಿನ ಸಂಭ್ರಮದಲ್ಲಿ ತೇಲುತ್ತಿರುವ ಬಿಜೆಪಿ ಗೆಲುವಿನ ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

ಬಹುತೇಕ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ–ಶಿವಸೇನೆ ಮೈತ್ರಿಕೂಟ ನಿಚ್ಚಳ ಬಹುಮತ ಸಾಧಿಸಲಿದೆ ಮತ್ತು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು.

ಮುಂಬೈನ ವಿವಿಧ ಬಡಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಬೃಹತ್‌ ಕಟೌಟ್‌, ಪೋಸ್ಟರ್‌ಗಳು ರಾರಾಜಿಸುವ ಬಣ್ಣಬಣ್ಣದ ಪೆಂಡಾಲ್‌ಗಳು ಕಂಡುಬರುತ್ತಿವೆ. ಈ ಪೆಂಡಾಲ್‌ಗಳಲ್ಲಿ ಬೃಹತ್‌ ಟಿವಿಗಳನ್ನೂ ಅಳವಡಿಸಲಾಗಿದ್ದು, ಫಲಿತಾಂಶದ ಲೈವ್‌ ಪ್ರಸಾರ ನೋಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಫಲಿತಾಂಶ ಘೋಷಣೆಯ ನಂತರ ಹಂಚಲೆಂದು ಬಿಜೆಪಿ 5000 ಲಾಡು ಸಿದ್ಧಪಡಿಸುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು