ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಮ್ ಲೋಕದಲ್ಲಿ ದೇವೇಂದ್ರ, ಪವಾರ್: ನಗೆ ಉಕ್ಕಿಸುವ ಮಹಾರಾಷ್ಟ್ರ ಪ್ರಹಸನ

Last Updated 26 ನವೆಂಬರ್ 2019, 2:05 IST
ಅಕ್ಷರ ಗಾತ್ರ

ಮಹಾರಾಷ್ಟ್ರ ರಾಜಕಾರಣ ಪ್ರತಿ ಕ್ಷಣ ತೆಗೆದುಕೊಳ್ಳುತ್ತಿರುವ ತಿರುವುಗಳು, ಪ್ರತಿ ದಿನ ನಡೆಯುತ್ತಿರುವ ಕುತೂಹಲಕರ ಬೆಳವಣಿಗೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಗೆಚಟಾಕಿಗಳು ಸಿಡಿಯುತ್ತಿವೆ. ರಾಜಕಾರಣಿಗಳ ನಡವಳಿಕೆಗಳನ್ನು ಕಟ್ಟಿಕೊಡುವ ಮೀಮ್‌ಗಳು, ಹಾಸ್ಯಭರಿತ ವಿಡಂಬನೆಗಳು ನೆಟ್ಟಿಗರ ಸೃಜನಾತ್ಮಕ ಹಾಸ್ಯಪ್ರಜ್ಞೆಗೆ ಸಾಕ್ಷಿಯಾಗಿವೆ.

ಬಿಜೆಪಿಯ ದೇವೇಂದ್ರ ಫಡಣವೀಸ್‌ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ, ಎನ್‌ಸಿಪಿಯ ಅಜಿತ್‌ ಪವಾರ್‌ ಉಪ ಮುಖ್ಯಮಂತ್ರಿಯಾಗಿ ತುರಾತುರಿಯಲ್ಲಿ ‍ಪ್ರಮಾಣ ವಚನ ಸ್ವೀಕರಿಸಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ನಗೆಯ ರಸದೌತಣವನ್ನೇ ಉಣಬಡಿಸುತ್ತಿದೆ.

ದೇವೇಂದ್ರ ಫಡಣವೀಸ್‌ ಮತ್ತು ಅಜಿತ್‌ ಪವಾರ್‌ ಅವರಿಗೆ ಅಧಿಕಾರ ಸ್ವೀಕರಿಸಲು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವಕಾಶ ಕಲ್ಪಿಸಿಕೊಟ್ಟಿದ್ದರು. ಅಧಿಕಾರ ಸ್ವೀಕರಿಸಿದ ಈ ಇಬ್ಬರು ನಾಯಕರಿಗೆ ಪ್ರಧಾನಿ ಟ್ವೀಟ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದರು.

ಆ ಎಲ್ಲ ಘಟನಾವಳಿಗಳು, ಕ್ಷಿಪ್ರ ಬೆಳವಣಿಗೆಗಳು, ತರಾತುರಿಯ ನಿರ್ಧಾರಗಳು... ನೆಟ್ಟಿಗರ ನಗೆ ಚಟಾಕಿಗಳಿಗೆ ಇಂಧನ ಒದಗಿಸಿವೆ. ನೀವು ಹೊಟ್ಟೆ ಹುಣ್ಣಾಗುವಂತೆ ನಗಬೇಕಾ...? ಇಲ್ಲಿವೆ ಕೆಲ ಹಾಸ್ಯ ಚಟಾಕಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT