ಸೋಮವಾರ, ಏಪ್ರಿಲ್ 6, 2020
19 °C

ಮಹಾತ್ಮ ಗಾಂಧಿ ಕಟ್ಟಾ ಸನಾತನಿ ಹಿಂದೂ ಆಗಿದ್ದರು: ಮೋಹನ್ ಭಾಗವತ್

ಪಿಟಿಐ Updated:

ಅಕ್ಷರ ಗಾತ್ರ : | |

Mohan Bhagwat

ನವದೆಹಲಿ: ಮಹಾತ್ಮ ಗಾಂಧಿ  ಕಟ್ಟಾ ಸನಾತನಿ ಹಿಂದೂ ಆಗಿದ್ದರು. ಅವರು ತಮ್ಮ ನಂಬಿಕೆಯಲ್ಲಿ ಅಚಲರಾಗಿದ್ದು, ಇತರರ ನಂಬಿಕೆಗಳನ್ನೂ ಗೌರವಿಸುತ್ತಿದ್ದರು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಸೋಮವಾರ ದೆಹಲಿಯ ಗಾಂಧಿ ಸ್ಮೃತಿ ಸ್ಮಾರಕಭವನದಲ್ಲಿ ಗಾಂಧಿ ಬಗ್ಗೆ ಇರುವ 'ಗಾಂಧಿ ಕೊ ಸಮಝ್‌ನೇ ಕಾ ಯಹೀ ಸಮಯ್' ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಭಾಗವತ್,  ಗಾಂಧಿ ಕಟ್ಟಾ ಸನಾತನಿ ಹಿಂದೂ ಆಗಿದ್ದರಿಂದ  ದೇವರನ್ನು ಪೂಜಿಸಲು ವಿವಿಧ ವಿಧಾನಗಳ ಬಗ್ಗೆ ತಾರತಮ್ಯ ಮಾಡುತ್ತಿರಲಿಲ್ಲ. ಹಾಗಾಗಿ  ಅವರು ತಮ್ಮ ನಂಬಿಕೆಗೆ ಬದ್ಧರಾಗಿದ್ದು, ಇತರರ ನಂಬಿಕೆಗಳನ್ನೂ ಗೌರವಿಸುವಂತೆ ಹೇಳುತ್ತಿದ್ದರು ಎಂದಿದ್ದಾರೆ. 

ಅವರ ಪರೀಕ್ಷೆಗಳು ಅಥವಾ ಚಳವಳಿಯು ಬೇರೆ ದಾರಿ ಹಿಡಿದರೆ ಅವರು ಪಶ್ಚಾತ್ತಾಪ ಪಡುತ್ತಿದ್ದರು. ಈಗಿನ ಕಾಲದಲ್ಲಿ ಚಳವಳಿಯಲ್ಲಿ ಏನಾದರೂ ಎಡವಟ್ಟಾದರೆ  ಅಥವಾ ಕಾನೂನಿನ ತೊಡಕು ಎದುರಾದರೆ ಅದಕ್ಕೆ ಯಾರೂ ಪಶ್ಚಾತ್ತಾಪ ಪಡುವುದಿಲ್ಲ. ಸಾಮಾನ್ಯವಾಗಿ ಪ್ರತಿಭಟನೆಗೆ ನೇತೃತ್ವ ವಹಿಸಿದವರು ಇದಕ್ಕೆ ಬೆಲೆ ತೆರಬೇಕಾಗುತ್ತದೆ. ಆದರೆ ಚಳವಳಿಯ ಹಿಂದಿರುವವರಿಗೆ ಮಾತ್ರ ಗೆಲುವು ಅಥವಾ ಸೋಲಿನ ಪ್ರಶ್ನೆ ಇರುವುದು ಎಂದು ಭಾಗವತ್ ಹೇಳಿದ್ದಾರೆ.

ಗಾಂಧಿಯವರ ಆದರ್ಶಗಳು ಭಾರತೀಯವಾಗಿದ್ದು ಹಾಗಾಗಿ ಅವರೆಂದಿಗೂ ತಮ್ಮ ಹಿಂದೂ ರುಜುವಾತುಗಳನ್ನು ಮುಚ್ಚಿಡಲಿಲ್ಲ. ಭಾರತದ ಬಗ್ಗೆ ಗಾಂಧಿ ಅವರ ಕನಸುಗಳು ಈಗ ನನಸಾಗುತ್ತಿವೆ.

ಈಗಿನ ಯುವ ಜನಾಂಗ ಗಾಂಧಿ ಕನಸಿನ ಭಾರತಕ್ಕೆ  ರೂಪ ನೀಡಲಿದೆ ಎಂಬ ಭರವಸೆ ನನಗಿದೆ.  ಇಂದಿನಿಂದ 20 ವರ್ಷಗಳ ನಂತರ  ಗಾಂಧಿ ಕನಸು ಕಂಡ ಭಾರತ ನಿರ್ಮಾಣವಾಗಿದೆ ಎಂದು ಹೇಳುವ ಸ್ಥಿತಿಯಲ್ಲಿ ನಾವಿರಬಹುದು ಎಂದು ಹೇಳಿದ ಭಾಗವತ್, ಗಾಂಧಿಯನ್ನು ಸಂತ ಎಂದು ಬಣ್ಣಿಸಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು