ಶುಕ್ರವಾರ, ಮಾರ್ಚ್ 5, 2021
21 °C

ಫೋರ್ಡ್‌ ಕಂಪನಿಯ ಭಾರತದ ವ್ಯವಹಾರ ಮಹೀಂದ್ರಾ ತೆಕ್ಕೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿ ಮತ್ತು ಅಮೆರಿಕದ ಫೋರ್ಡ್‌ ಮೋಟರ್‌ ಕಂಪನಿಯು ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿವೆ. ಇದರಿಂದ ಭಾರತದಲ್ಲಿ ಎರಡೂ ಕಂಪನಿಗಳ ಕಾರುಗಳನ್ನು ಈ ಜಂಟಿ ಪಾಲುದಾರಿಕಾ (ಜೆವಿ) ಕಂಪನಿ ಮಾರಾಟ ಮಾಡಲಿದೆ.

ಈ ಕುರಿತು ಮಂಗಳವಾರ ಘೋಷಣೆ ಮಾಡಿದ ಕಂಪನಿ, ₹657 ಕೋಟಿ ಮೊತ್ತದ ಶೇ 51ರಷ್ಟು ಪಾಲನ್ನು ಫೋರ್ಡ್‌ನಿಂದ ಪಡೆಯುವ ಮೂಲಕ ಆ ಕಂಪನಿಯ ವಾಹನಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಿ, ಮಾರುಕಟ್ಟೆ ಸೃಷ್ಟಿಸಲಿದೆ ಎಂದು ಹೇಳಿದೆ.

ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಂಟಿ ಪಾಲುದಾರಿಕೆಯ ಕಂಪನಿಯಲ್ಲಿ ಗರಿಷ್ಠ ಈಗ ಹೂಡಿರುವ ₹657 ಕೋಟಿಯನ್ನೂ ಒಳಗೊಂಡಂತೆ ₹1400 ಕೋಟಿ ಹೂಡಿಕೆ ಮಾಡಲಿದೆ. ಜತೆಗೆ ಭಾರತದಲ್ಲಿರುವ ಫೋರ್ಡ್‌ನ ಎರಡು ತಯಾರಿಕಾ ಘಟಕವೂ ಮಹೀಂದ್ರಾ ಪಾಲಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು