ಜಾಮಿಯ ವಿ.ವಿ| ಸಿಎಎ ವಿರೋಧಿ ಪ್ರತಿಭಟನೆ ವೇಳೆ ಗುಂಡಿನ ದಾಳಿ: ವ್ಯಕ್ತಿ ವಶ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಜಾಮಿಯ ಮಿಲಿಯಾ ವಿಶ್ವವಿದ್ಯಾಲಯದ ಬಳಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ಘಟನೆ ಗುರುವಾರ ನಡೆದಿದೆ.
ದಾಳಿಯಿಂದ ವಿದ್ಯಾರ್ಥಿಯೊಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಕಪ್ಪು ಜಾಕೆಟ್ ಧರಿಸಿದ ದಾಳಿಕೋರ ಪ್ರತಿಭಟನಾಕಾರರ ಎದುರು ಬಂದೂಕು ತೋರಿಸುತ್ತಾ ‘ಇಲ್ಲಿದೆ ನಿಮ್ಮ ಸ್ವತಂತ್ರ್ಯ’ ಎಂದು ಕೂಗುತ್ತಿದ್ದನು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
‘ಪೊಲೀಸರು ಆತನ ಸಮೀಪದಲ್ಲಿಯೇ ಇದ್ದರು’ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಅಹಮ್ಮದ್ ಜಾಹಿರ್ ಹೇಳಿದರು.
#WATCH A man brandishes gun in Jamia area of Delhi, culprit has been detained by police. More details awaited. pic.twitter.com/rAeLl6iLd4
— ANI (@ANI) January 30, 2020
ದಾಳಿಕೋರನು ಸಿಂಗಲ್ ಬ್ಯಾರೆಲ್ ಬಂದೂಕನ್ನು ಹಿಡಿದು, ಜಾಮಿಯ ವಿವಿ ಹೊರಗೆ ನಿಯೋಜಿಸಿದ್ದ ಹತ್ತಾರು ಪೊಲೀಸರಿಗೆ ಮೀಟರ್ ಅಳತೆ ದೂರದಲ್ಲಿ ಪ್ರತಿಭಟನಾಕಾರರು ಸೇರಿದ್ದಲ್ಲಿ ನಿಂತು ದಾಳಿ ನಡೆಸಿರುವುದು ವಿಡಿಯೊಗಳಲ್ಲಿ ಸೆರೆಯಾಗಿದೆ.
‘ತಕ್ಷಣ ಆತನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.