ಚೆಮ್ಸ್ಫೋರ್ಡ್ (ಬ್ರಿಟನ್): ಭಾರತ ಯುವ ತಂಡದ (19 ವರ್ಷದೊಳಗಿವರ) ಬೌಲರ್ಗಳು, ಭಾನುವಾರ ಆರಂಭಗೊಂಡ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿದರು.

ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತು. ಟಾಸ್ ಗೆದ್ದ ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ ಅವರು ಆತಿಥೇಯರನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು.

ಆದಿತ್ಯ ರಾವತ್ ಹಾಗೂ ಆರ್.ಎಸ್. ಅಂಬರೀಷ್ ಅವರ ದಾಳಿಗೆ ತತ್ತರಿಸಿದ ಇಂಗ್ಲೆಂಡ್, 80 ರನ್ಗಳಾಗುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ, ನಾಯಕ ಥಾಮಸ್ ರ್ಯೂ ಅವರು ಏಕನಾಥ್ ಸಿಂಗ್ ಜೊತೆಗೂಡಿ 90 ರನ್ ಪೇರಿಸಿದರು.

ಸ್ಪಿನ್ನರ್ ನಮನ್ ಪುಷ್ಪಕ್ ಅವರು ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು. ದಿನದಂತ್ಯಕ್ಕೆ ಆತಿಥೇಯರು 6 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್ 19 ವರ್ಷದೊಳಗಿನವರ ತಂಡ: 44 ಓವರ್ಗಳಲ್ಲಿ 6 ವಿಕೆಟ್ಗೆ 177(ಥಾಮಸ್ ರ್ಯೂ 59, ಏಕನಾಥ್ ಸಿಂಗ್ ಔಟಾಗದೇ 66; ಆದಿತ್ಯ ರಾವತ್ 2ಕ್ಕೆ 42, ಆರ್.ಎಸ್. ಅಂಬರೀಶ್ 2ಕ್ಕೆ 39)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.