ಶುಕ್ರವಾರ, ಫೆಬ್ರವರಿ 21, 2020
29 °C

ಶಾಹೀನ್‌ಬಾಗ್‌ ಪ್ರತಿಭಟನಾ ಸ್ಥಳಕ್ಕೆ ನುಗ್ಗಿದ ವ್ಯಕ್ತಿಯ ಕೈಯಲ್ಲಿ ಗನ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

video grab

ದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಶಾಹೀನ್‌ಬಾಗ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಯುತ್ತಿದ್ದಾಗ ಗನ್ ಹಿಡಿದ ವ್ಯಕ್ತಿಯೊಬ್ಬ ಪ್ರತಿಭಟನಕಾರರ ನಡುವೆ ನುಗ್ಗಿದ್ದಾನೆ. ವ್ಯಕ್ತಿಯ ಕೈಯಲ್ಲಿ ಗನ್ ಇರುವುದನ್ನು ಗಮನಿಸಿದ ಪ್ರತಿಭಟನಕಾರರು ತಕ್ಷಣವೇ ಅದನ್ನು ವಶ ಪಡಿಸಿಕೊಂಡಿದ್ದಾರೆ.

ಪ್ರತಿಭಟನಕಾರರಲ್ಲಿ ಮಾತನಾಡುವ ಸಲುವಾಗಿ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದ ವ್ಯಕ್ತಿಯ ಕೈಯಲ್ಲಿ ಇದ್ದದ್ದು ಪರವಾನಗಿ ಇರುವ ಗನ್ ಎಂದು ಎಎನ್‌ಐ  ಸುದ್ದಿಸಂಸ್ಥೆ ವರದಿ  ಮಾಡಿದೆ. 

 ಶಸ್ತ್ರಾಸ್ತ್ರ ಹೊಂದಿದ ಸಮಾಜ ದ್ರೋಹಿಯೊಬ್ಬ ಪ್ರತಿಭಟನಕಾರರ ನಡುವೆ ನುಗ್ಗಿದ್ದಾನೆ ಎಂದು ಶಾಹೀನ್‌ಬಾಗ್ ಪ್ರತಿಭಟನೆಯ ಸಂಚಾಲಕರು ಪ್ರತಿಕ್ರಿಯಿಸಿದ್ದಾರೆ.

ಬಲಪಂಥೀಯ ಗುಂಪುಗಳ ಜನರು ಇಲ್ಲಿ ನುಗ್ಗಿ ದಾಳಿ ನಡೆಸಬಹುದು ಎಂಬ ಬೆದರಿಕೆ ನಮಗಿದೆ. ಈ ಪ್ರತಿಭಟನೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಹಿಂಸಾ ಚಟುವಟಿಕೆಗಳ ವಿರುದ್ದ ನಿಲ್ಲಬೇಕು ಎಂದು  ಸಂಚಾಲಕರು ಟ್ವೀಟಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಪರಿಸ್ಥಿತಿ ದೆಹಲಿಗೂ ಬಂದೀತು ಜೋಕೆ: ಬಿಜೆಪಿ ಸಂಸದ ಪರ್ವೇಶ್ ವರ್ಮಾ

ಶಾಹೀನ್‌ಬಾಗ್ ಪ್ರತಿಭಟನಕಾರರು ನಿಮ್ಮ ಮನೆಗೆ ನುಗ್ಗಿ ಮಕ್ಕಳು, ಸಹೋದರಿಯರ ಮೇಲೆ ಅತ್ಯಾಚಾರವೆಸಗುತ್ತಾರೆ ಎಂದು ಪಶ್ಚಿಮ  ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ. 

ಇದನ್ನೂ ಓದಿ: ದೆಹಲಿ ಪ್ರಚಾರದಲ್ಲಿ ‘ಗುಂಡಿಕ್ಕಿ ಕೊಲ್ಲಿ’!

ಸೋಮವಾರ ದೆಹಲಿ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದ ಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್ ದೇಶದ್ರೋಹಿಗಳನ್ನು’ ಎಂದು ಕೂಗಿದಾಗ, ನೆರೆದಿದ್ದ ಜನರು ‘ಗುಂಡಿಕ್ಕಿ’ ಕೊಲ್ಲಿ ಎಂದು ಘೋಷಣೆ  ಕೂಗಿದ್ದರು.

 
  
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು