ಮಂಗಳವಾರ, ಸೆಪ್ಟೆಂಬರ್ 17, 2019
25 °C

ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ: ನರೇಂದ್ರ ಮೋದಿ 

Published:
Updated:

ನವದೆಹಲಿ: ಮಹಾರಾಷ್ಟ್ರಗ ಗಡ್‌ಚಿರೋಲಿಯಲ್ಲಿ ಬುಧವಾರ ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ 16 ಯೋಧರು ಹುತಾತ್ಮರಾಗಿದ್ದಾರೆ.

ಈ ದಾಳಿಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಗಡ್‌ಚಿರೋಲಿಯಲ್ಲಿ ಭದ್ರತಾ ಸಿಬ್ಬಂದಿ ಮೇಲೆ ನಡೆದ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಧೀರ ಯೋಧರಿಗೆ ನನ್ನ ನಮನಗಳು. ಅವರ ತ್ಯಾಗವನ್ನು ನಾವು ಮರೆಯವುದಿಲ್ಲ. ಧೀರ ಯೋಧರ ಕುಟುಂಬಗಳ ಜತೆ ನಾನಿದ್ದೇನೆ. ಈ ರೀತಿಯ ಹಿಂಸಾಚಾರ ನಡೆಸಿದ ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿ  ಟ್ವೀಟ್ ಮಾಡಿದ್ದಾರೆ.

Post Comments (+)