ಶನಿವಾರ, ಸೆಪ್ಟೆಂಬರ್ 18, 2021
30 °C

ಕಾಂಗ್ರೆಸ್‌ನವರು ನನ್ನನ್ನು ಹುಚ್ಚು ನಾಯಿ, ಭಸ್ಮಾಸುರ ಎಂದಿದ್ದರು: ನರೇಂದ್ರ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಕ್ಷೇತ್ರ(ಹರ್ಯಾಣ): ಕಾಂಗ್ರೆಸ್ ತಮ್ಮ ಪ್ರೀತಿಯ ನಿಘಂಟುವಿನಿಂದ ಕೆಟ್ಟಪದಗಳನ್ನು ಬಳಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬುಧವಾರ ಹರ್ಯಾಣದ ಕುರುಕ್ಷೇತ್ರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ನನ್ನನ್ನು ಕೆಟ್ಟ ಪದಗಳಿಂದ ಹಂಗಿಸಿದ್ದಾರೆ. ಅವರು ನನ್ನ ಅಮ್ಮನನ್ನೂ ಬಿಡಲಿಲ್ಲ. ಕಾಂಗ್ರೆಸ್‍ನ ನಾಯಕರೊಬ್ಬರು ನನ್ನನ್ನು ಗಂದೀ ನಾಲೀ ಕಾ ಕೀಡಾ (ಕೊಳಚೆ ನೀರಿನ ಹುಳು) ಎಂದಿದ್ದರು. ಇನ್ನೊಬ್ಬ ನಾಯಕ ನನ್ನನ್ನು ಹುಚ್ಚು ನಾಯಿ ಅಂದರೆ ಮತ್ತೊಬ್ಬರು ಭಸ್ಮಾಸುರ ಎಂದರು. ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಕಾಂಗ್ರೆಸ್ ನಾಯಕರೊಬ್ಬರು ನನ್ನನ್ನು ಮಂಗ ಎಂದಾಗ ಇನ್ನೊಂದು ಸಚಿವರು ನನ್ನನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದರು.

 ನನ್ನ ಅಮ್ಮನನ್ನು ಅವರು ನಿಂದಿಸಿದ್ದಾರೆ. ನನ್ನ ಅಪ್ಪ ಯಾರು ಎಂದು ಕೇಳಿದ್ದಾರೆ.ಇದೆಲ್ಲವೂ ನಾನು ಪ್ರಧಾನಿ ಆದ ಮೇಲೆ ಕೇಳಿ ಬಂದದ್ದು. ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ಪ್ರಶ್ನಿಸಿದ್ದಕ್ಕಾಗಿ ನನಗೆ ಇದೆಲ್ಲಾ ಕೇಳಬೇಕಾಗಿ ಬಂತು.

ನಾನು ಅವರ ಭ್ರಷ್ಟಾಚಾರವನ್ನು ನಿಲ್ಲಿಸಿ ಕುಟುಂಬ ರಾಜಕಾರಣವನ್ನು ಪ್ರಶ್ನಿಸಿದೆ. ಅವರು ಪ್ರೀತಿಯ ಮುಖವಾಡ ಧರಿಸಿ ನನ್ನನ್ನು ನಿಂದಿಸುತ್ತಿದ್ದಾರೆ. ಕಾಂಗ್ರೆಸ್ ನನ್ನನ್ನು  ಹಿಟ್ಲರ್, ದಾವೂದ್ ಇಬ್ರಾಹಿಂ, ಮುಸೋಲಿನಿಗೆ ಮೊದಲಾದವರಿಗೆ ಹೋಲಿಸಿತು ಎಂದಿದ್ದಾರೆ ಮೋದಿ.

ರಾಹುಲ್ ಅವರ ಅಪ್ಪ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು  ಮೋದಿ ಭ್ರಷ್ಟಾಚಾರಿ ನಂ.1 ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ನಿಮ್ಮ ಬಗ್ಗೆ ನನ್ನ ಹೃದಯದಲ್ಲಿ ಪ್ರೀತಿ ಮಾತ್ರ ಇದೆ, ನಿಮಗೆ ಅಪ್ಪುಗೆಗಳು ಎಂದಿದ್ದರು.

ರಾಜೀವ್ ಗಾಂಧಿಯನ್ನು ಭ್ರಷ್ಟಾಚಾರಿ ಎಂದ ಮೋದಿ ಹೇಳಿಕೆಗೆ ಕಾಂಗ್ರೆಸ್ಸಿಗರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು, ಆದಾಗ್ಯೂ, ಚುನಾವಣಾ ಆಯೋಗ ಈ ಪ್ರಕರಣದಲ್ಲಿ ಮೋದಿಗೆ ಕ್ಲೀನ್‌ಚಿಟ್ ನೀಡಿತ್ತು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು