ಸೋಮವಾರ, ಮಾರ್ಚ್ 1, 2021
30 °C

ಮುಂಬೈ ಮಹಾನಗರ ಪಾಲಿಕೆ: ದೂರಾಗದ ಕೋವಿಡ್–19 ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕೋವಿಡ್–19ರ ವಿರುದ್ಧದ ಎರಡು ತಿಂಗಳ ಹೋರಾಟದ ನಂತರವೂ ಮುಂಬೈ ಮಹಾನಗರಪಾಲಿಕೆ ವಲಯ (ಎಂಎಂಆರ್) ದೇಶದ ಆತಂಕದ ವಲಯವಾಗೇ ಉಳಿದಿದೆ. ಇಲ್ಲಿ ಇದುವರೆವಿಗೂ 348 ಜನರು ಸತ್ತಿದ್ದು, 9,709 ಸೋಂಕಿನ ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿಯೇ ಮುಂಬೈ ಮತ್ತು ಮುಂಬೈ ಹೊರವಲಯದಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಎಂಎಂಆರ್‌ ವ್ಯಾಪ್ತಿಗೆ ಮುಂಬೈ ನಗರ, ಹೊರವಲಯ, ಠಾಣೆ ಮತ್ತು ಪಾಲ್ಗರ್, ರಾಯಗಡ ಜಿಲ್ಲೆಯ ಭಾಗಶಃ ಪ್ರದೇಶಗಳು ಬರಲಿವೆ.

ವ್ಯಾಪ್ತಿ 6,355 ಚದರ ಕಿ.ಮೀ ಆಗಿದ್ದು, ಭಾರತದ ಒಟ್ಟು ಭೌಗೋಳಿಕ ವ್ಯಾಪ್ತಿಯ ಶೇ 2ರಷ್ಟು.

ಇದರ ವ್ಯಾಪ್ತಿಯಲ್ಲಿ ಮುಂಬೈ, ಠಾಣೆ, ನವಿ ಮುಂಬೈ, ಕಲ್ಯಾಣ್–ಡೋಂಬಿವಿಲಿ, ಪನ್ವೆಲ್‌, ವಸಯಿ–ವಿರಾರ್, ಮಿರಾ–ಭಾಯಂಧರ್, ಭಿವಂಡಿ–ನಿಜಾಂಪುರ ಮತ್ತು ಉಲ್ಲಾಸನಗರ ನಗರಪಾಲಿಕೆಗಳು ಬರಲಿವೆ. ಅಲ್ಲದೆ, ಒಂಬತ್ತು ನಗರಸಭೆಗಳು ಸೇರಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು