ಭಾನುವಾರ, ಮೇ 16, 2021
22 °C

ಮುಸ್ಲಿಂ ಸಹೋದರಿಯರೇ, ನಿಮ್ಮ ನಿಜವಾದ ಸಹೋದರರನ್ನು ಗುರುತಿಸಿ: ಯೋಗಿ ಆದಿತ್ಯನಾಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಕಾಂಗ್ರೆಸ್,ಎಸ್‍ಪಿ ಹಾಗೂ ಬಿಎಸ್‍ಪಿ ಅಲಿ ಮೇಲೆ ವಿಶ್ವಾಸವಿಟ್ಟರೆ, ನಮಗೆ ಬಜರಂಗ ಬಲಿ ಮೇಲೆ ನಂಬಿಕೆ ಇದೆ ಎಂದಿದ್ದರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಇದೀಗ ಮುಸ್ಲಿಂ  ಸಹೋದರಿಯರು ಅವರ ನಿಜವಾದ ಸಹೋದರರನ್ನು ಗುರುತಿಸಿ ಎಂದು ಆದಿತ್ಯನಾಥ ಕರೆ ನೀಡಿದ್ದಾರೆ. 

ಉತ್ತರ ಪ್ರದೇಶದ ಆವಲಾದಲ್ಲಿ ಬುಧವಾರ ರ‍್ಯಾಲಿಯಲ್ಲಿ ಮಾತನಾಡಿದ ಯೋಗಿ,  ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗಾಗಿ ದುಡಿದಿದ್ದಾರೆ. ದೇಶದ ಅರ್ಧಕ್ಕಿಂತಲೂ ಹೆಚ್ಚು ಜನರು ಅವರೊಂದಿಗೆ ಇದ್ದಾರೆ ಎಂಬುದು ಬಿಜೆಪಿಯ ಹೆಮ್ಮೆ.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ನಮ್ಮ ಮುಸ್ಲಿಂ ಸಹೋದರಿಯರಿಗೆ ನಿಜವಾದ  ಸ್ವಾತಂತ್ರ್ಯ ಸಿಕ್ಕಿದ್ದು ಇತ್ತೀಚಿಗೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ. ಶತಮಾನಗಳ ಕಾಲ ನಿಂದನೆ ಮತ್ತು ಬಂಧನದಲ್ಲಿದ್ದ ನಮ್ಮ ಮುಸ್ಲಿಂ ಸಹೋದರಿಯರನ್ನು ನಾವು ಸ್ವತಂತ್ರರನ್ನಾಗಿ  ಮಾಡಿದ್ದೇವೆ. ತ್ರಿವಳಿ ತಲಾಖ್‍ನಿಂದ ಅವರ ಮೇಲೆ ದೌರ್ಜನ್ಯವೆಸಗಲಾಗುತ್ತಿತ್ತು. ಇದನ್ನು ನಿಲ್ಲಿಸುವ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅವರಿಗೆ ಗೌರವ ತಂದು ಕೊಟ್ಟಿತು. ಮುಸ್ಲಿಂ ಸಹೋದರಿಯರೇ, ನೀವು ನಿಮ್ಮ ನಿಜವಾದ ಸಹೋದರರನ್ನು ಗುರುತಿಸಿ ಎಂದಿದ್ದಾರೆ ಯೋಗಿ ಆದಿತ್ಯನಾಥ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು