ಐಪಿಎಲ್ ಮತ್ತು ಚುನಾವಣೆಯನ್ನು ಏಕಕಾಲಕ್ಕೆ ನಡೆಸಬಲ್ಲ ತಾಕತ್ತು ನನಗಿದೆ: ಮೋದಿ

ಬುಧವಾರ, ಮೇ 22, 2019
29 °C

ಐಪಿಎಲ್ ಮತ್ತು ಚುನಾವಣೆಯನ್ನು ಏಕಕಾಲಕ್ಕೆ ನಡೆಸಬಲ್ಲ ತಾಕತ್ತು ನನಗಿದೆ: ಮೋದಿ

Published:
Updated:

ಕರೌಲಿ: ಐಪಿಎಲ್ ಮತ್ತು ಲೋಕಸಭಾ ಚುನಾವಣೆಯನ್ನು ಏಕಕಾಲಕ್ಕೆ ನಡೆಸಬಲ್ಲ ತಾಕತ್ತು ನನಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ರಾಜಸ್ಥಾನದ ಕರೌಲಿಯಲ್ಲಿ ಶುಕ್ರವಾರ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಸರಿಯಾದ ಭದ್ರತೆ ಒದಗಿಸಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಎರಡು ಬಾರಿ ಐಪಿಎಲ್ ಪಂದ್ಯವನ್ನು ಭಾರತದಿಂದ ಹೊರಗೆ ನಡೆಸಿತ್ತು ಎಂದಿದ್ದಾರೆ.

ಯುವಜನರು ಐಪಿಎಲ್ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಎರಡು ಬಾರಿ ಈ ಪಂದ್ಯ ಭಾರತದ ಹೊರಗೆ ನಡೆದಿತ್ತು. ದಕ್ಷಿಣ ಆಫ್ರಿಕಾ ಐಪಿಎಲ್‌ಗೆ ವೇದಿಕೆ ಒದಗಿಸಿತ್ತು. ಆ ರೀತಿ ಆಗಿದ್ದು 2009 ಮತ್ತು 2014ರಲ್ಲಿ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಉಗ್ರರಿಗೆ ಹೆದರುತ್ತಿತ್ತು. ಆ ಸರ್ಕಾರಕ್ಕೆ ಧೈರ್ಯವೇ ಇಲ್ಲ.

2009 ಮತ್ತು 2014ರಲ್ಲಿ ಲೋಕಸಭಾ ಚುನಾನಣೆ ನಡೆದಿತ್ತು. ಪೊಲೀಸರು ಬ್ಯುಸಿ ಆಗಿದ್ದರಿಂದ ನಮಗೆ ಐಪಿಎಲ್ ಇರಲಿಲ್ಲ. ಈಗ ಐಪಿಎಲ್ ನಡೆಯುತ್ತಿದೆ. ನವರಾತ್ರಿ, ರಾಮನವಮಿ, ಹನುಮಾನ್ ಜಯಂತಿ ಎಲ್ಲವೂ ಇದೆ. ರಂಜಾನ್ ಹತ್ತಿರ ಬರುತ್ತಿದೆ, ಆದರೂ ದೇಶದಲ್ಲಿ ಐಪಿಎಲ್ ನಡೆಯುತ್ತಿದೆ.

ಆ ಸರ್ಕಾರ ಹೆದರಿ ಓಡುತ್ತಿತ್ತು, ಆದರೆ ಮೋದಿಯವರ ಸೇನೆ ಮಾತ್ರ ಗಟ್ಟಿಯಾಗಿ ನಿಂತಿದೆ.

ಸಾಕಷ್ಟು  ಭದ್ರತಾ ಪಡೆಗಳು ಇಲ್ಲದಿರುವುದರಿಂದ ಐಪಿಎಲ್ ಮತ್ತು ಚುನಾವಣೆಯನ್ನು ಏಕಕಾಲಕ್ಕೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದ್ದರಿಂದ 2009ರಲ್ಲಿ ಐಪಿಎಲ್‌ನ್ನು ದೇಶದ ಹೊರಗೆ ಆಯೋಜಿಸಲಾಗಿತ್ತು.  2014ರಲ್ಲಿಯೂ ಚುನಾವಣೆ ಮತ್ತು ಐಪಿಎಲ್ ಒಟ್ಟೊಟ್ಟಿಗೆ ಇದ್ದಿದ್ದರಿಂದ ಐಪಿಎಲ್‌ನ್ನು ಹೊರದೇಶದಲ್ಲಿ ಮಾಡಲಾಗಿತ್ತು.
 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 1

  Sad
 • 0

  Frustrated
 • 15

  Angry

Comments:

0 comments

Write the first review for this !