ಭಾನುವಾರ, ಮಾರ್ಚ್ 29, 2020
19 °C

ಅಹಮದಾಬಾದ್‌ನಲ್ಲಿ ಪ್ರಧಾನಿ ಮೋದಿ, ಟ್ರಂಪ್ ಭೇಟಿ: ಭದ್ರತೆಗೆ 10 ಸಾವಿರ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಫೆಬ್ರುವರಿ 24ರಂದು ಅಹಮದಾಬಾದ್‌ಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಸುರಕ್ಷತೆಗಾಗಿ 10,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

‘ಇವರಲ್ಲದೆ ಎಸ್‌ಪಿಜಿ, ಎನ್‌ಎಸ್‌ಜಿ ಹಾಗೂ ಇತರ ವಿಶೇಷ ರಕ್ಷಣಾ ಪಡೆಗಳ ಸಿಬ್ಬಂದಿಯೂ ರಕ್ಷಣಾ ಕಾರ್ಯದಲ್ಲಿ ತೊಡಗಿರುತ್ತಾರೆ’ ಎಂದು ಅಹಮದಾಬಾದ್‌ನ ಡಿಸಿಪಿ ವಿಜಯ್‌ ಪಟೇಲ್‌ ಶನಿವಾರ ತಿಳಿಸಿದರು.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ನಾನೇ ಮೊದಲು, ನನ್ನ ನಂತರ ನರೇಂದ್ರ ಮೋದಿ ಎಂದ ಟ್ರಂಪ್

ಅಮೆರಿಕದ ಅಧ್ಯಕ್ಷರೊಬ್ಬರು ಇದೇ ಮೊದಲ ಬಾರಿಗೆ ಗುಜರಾತ್‌ಗೆ ಬರುತ್ತಿದ್ದು, ಈ ಅಪರೂಪದ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳಬಹುದು ಎಂದು ಪೊಲೀಸರು ನಿರೀಕ್ಷಿಸಿದ್ದಾರೆ. ಅಮೆರಿಕದಲ್ಲಿ ಸದ್ಯದಲ್ಲೇ ಚುನಾವಣೆಗಳು ನಡೆಯಲಿವೆ. ಆ ದೇಶದಲ್ಲಿ ಭಾರತೀಯರ ಸಂಖ್ಯೆ ಸಾಕಷ್ಟಿದೆ. ಅದರಲ್ಲೂ ಗುಜರಾತಿ ಮೂಲದ ಜನರ ಸಂಖ್ಯೆಯು ಹೆಚ್ಚಾಗಿದೆ. ಆ ಕಾರಣಕ್ಕೆ ಟ್ರಂಪ್‌ ಅವರ ಭೇಟಿಯು ರಾಜಕೀಯವಾಗಿಯೂ ಮಹತ್ವ ಪಡೆದಿದೆ.

‘ಟ್ರಂಪ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಗಾಂಧಿ ಆಶ್ರಮದವರೆಗೆ ಮತ್ತು ಅಲ್ಲಿಂದ ಮೊಟೆರಾ ಕ್ರೀಡಾಂಗಣದವರೆಗೆ ರೋಡ್‌ಶೋ ನಡೆಸುವರು. ₹700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೊಟೆರಾ ಕ್ರಿಕೆಟ್‌ ಕ್ರೀಡಾಂಗಣವನ್ನು ಈ ಇಬ್ಬರು ನಾಯಕರು ಉದ್ಘಾಟಿಸುವರು’ ಎಂದು ಪಟೇಲ್‌ ತಿಳಿಸಿದರು.

ಸ್ವಾಗತಕ್ಕೆ ಪ್ರಧಾನಿ ಮೋದಿ
ಟ್ರಂಪ್‌ ಅವರನ್ನು ಸ್ವಾಗತಿಸುವ ಸಲುವಾಗಿ ಪ್ರಧಾನಿ ಮೋದಿ ಫೆ. 23ರಂದೇ ಅಹಮದಾಬಾದ್‌ಗೆ ಬರಲಿದ್ದಾರೆ. ಟ್ರಂಪ್‌ ಅವರ ಸ್ವಾಗತಕ್ಕೆ ಮಾಡಿರುವ ಸಿದ್ಧತೆಗಳನ್ನು ಸ್ವತಃ ಪ್ರಧಾನಿಯೇ ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಕಾರ್ಯಕ್ರಮದ ಆಯೋಜನೆಗಾಗಿ ಐಎಎಸ್‌, ಐಪಿಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚಿಸಲಾಗಿದೆ.

24ರಂದು ಮಧ್ಯಾಹ್ನ 12.30ಕ್ಕೆ ಟ್ರಂಪ್ ಅವರ ವಿಮಾನವು ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. 100ಕ್ಕೂ ಹೆಚ್ಚು ಮಂದಿ ಗುಪ್ತಚರ ಸಿಬ್ಬಂದಿ ಸೇರಿ, 500ಕ್ಕೂ ಹೆಚ್ಚು ಜನರು ಟ್ರಂಪ್‌ ಅವರ ತಂಡದಲ್ಲಿ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ರಕ್ಷಣೆಯಲ್ಲಿ...
* 25 ಐಪಿಎಸ್‌ ಅಧಿಕಾರಿಗಳು

* 65 ಎಸಿಪಿಗಳು

* 200 ಇನ್‌ಸ್ಪೆಕ್ಟರ್‌ಗಳು

* 800 ಸಬ್‌ ಇನ್‌ಸ್ಪೆಕ್ಟರ್‌ಗಳು

* 10,000 ಕಾನ್‌ಸ್ಟೆಬಲ್‌ಗಳು

ಇದನ್ನೂ ಓದಿ: ಟ್ರಂಪ್‌ ಭಾರತ ಭೇಟಿ ಹಿನ್ನೆಲೆ: ಅಹಮದಾಬಾದ್‌ನ ಸ್ಲಂ ಕಾಣಿಸದಂತೆ ಗೋಡೆ ನಿರ್ಮಾಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು