ಶನಿವಾರ, ಏಪ್ರಿಲ್ 4, 2020
19 °C

ಮುಂಬೈ: ಶರದ್ ಪವಾರ್ ಆಸ್ತಿ ₹60 ಲಕ್ಷ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಒಟ್ಟು ಆಸ್ತಿ ಮೌಲ್ಯ ಕಳೆದ ಆರು ವರ್ಷಗಳ ಅವಧಿಯಲ್ಲಿ ₹ 60 ಲಕ್ಷ ಹೆಚ್ಚಾಗಿದೆ. ಚುನಾವಣಾ ಪ್ರಮಾಣಪತ್ರದ ಅನುಸಾರ ಅವರ ಒಟ್ಟು ಆಸ್ತಿ ಮೌಲ್ಯ ₹ 32.73 ಕೋಟಿ.

ಮಾರ್ಚ್‌ 26ರಂದು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಆಸ್ತಿ ವಿವರ ಕುರಿತ ಪ್ರಮಾಣಪತ್ರದಲ್ಲಿ ಅವರು, ₹ 1 ಕೋಟಿ ಹೊಣೆಗಾರಿಕೆಯಿದ್ದು, ಸೋದರ ಸಂಬಂಧಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್‌ ಮತ್ತು ಸಂಬಂಧಿ ಪಾರ್ಥ ಪವಾರ್ ಅವರಿಂದ ಶೇರು ವರ್ಗಾವಣೆಗಾಗಿ ಮುಂಗಡವಾಗಿ ಠೇವಣಿ ಸ್ವೀಕರಿಸಲಾಗಿದೆ ಎಂದು ವಿವರಿಸಿದ್ದಾರೆ.

2104ರ ರಾಜ್ಯಸಭೆ ಚುನಾವಣೆ ವೇಳೆ ಅವರು ಒಟ್ಟು ₹ 32.13 ಕೋಟಿ ಆಸ್ತಿ ಘೊಷಿಸಿಕೊಂಡಿದ್ದರು. ಆಗ ಯಾವುದೇ ಹೊಣೆಗಾರಿಕೆಯನ್ನು ಉಲ್ಲೇಖಿಸಿರಲಿಲ್ಲ.

ವೇಣುಗೋಪಾಲ್‌ಗೆ ರಾಜ್ಯಸಭೆ ಟಿಕೆಟ್‌ 
ನವದೆಹಲಿ (ಪಿಟಿಐ):
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ರಾಜಸ್ಥಾನ ವಿಧಾನಸಭೆಯಿಂದ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ. ಇನ್ನೊಬ್ಬ ಪ್ರಧಾನ ಕಾರ್ಯದರ್ಶಿ ರಾಜೀವ್‌ ಸತಾವ್‌ ಮಹಾರಾಷ್ಟ್ರದಿಂದ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕೆ.ಟಿ.ಎಸ್‌. ತುಳಸಿ ಹಾಗೂ ಫೂಲೊ ದೇವಿ ನತಾಮ್‌ ಅವರಿಗೆ ಛತ್ತೀಸಗಡನಿಂದ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು