ಬುಧವಾರ, ಫೆಬ್ರವರಿ 19, 2020
29 °C

ನಾಯಿ ಬೊಗಳಿದ್ದಕ್ಕೆ ಹಲ್ಲೆ: ಹೃದಯಾಘಾತವಾಗಿ ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ನೆರೆಹೊರೆಯವರಿಂದ ಹಲ್ಲೆಗೊಳಗಾದ 35ರ ಪ್ರಾಯದ ಮಹಿಳೆಯ ಹೃದಯಾಘಾತದಿಂದ  ಮೃತಪಟ್ಟ ಘಟನೆ ಡಾಂಬಿವೇಲಿಯಲ್ಲಿ ನಡೆದಿದೆ. ನಾಯಿ ಬೊಗಳಿದ್ದರಿಂದ ಕೋಪಗೊಂಡ ನೆರೆಹೊರೆಯವರು ಹಲ್ಲೆ ನಡೆಸಿದ್ದಾರೆ.

ಮೃತರನ್ನು ಮುಂಬೈನ ಡಾಂಬಿವೇಲಿ ನಿವಾಸಿ ನಾಗಮ್ಮ ಶೆಟ್ಟಿ ಎಂದು ಗುರುತಿಸಲಾಗಿದ್ದು, ಅವರ ಸಾಕು ನಾಯಿ ನಿರಂತರವಾಗಿ ಬೊಗಳುತ್ತಿದ್ದರಿಂದ ಆಕ್ರೋಶಗೊಂಡ ನೆರೆ ಮನೆಯ ನಾಲ್ವರು ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.

ಹಲ್ಲೆಗೊಳಗಾಗಿದ್ದ ನಾಗಮ್ಮ ಶೆಟ್ಟಿ ಸ್ಥಳೀಯ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಅವರನ್ನು ಆಸ್ಪತ್ರೆಗೆ ತೆರೆಳುವಂತೆ  ಹೇಳಿದ್ದಾರೆ. ಆದರೆ ಅವರು ಮನೆಗೆ ತೆರೆಳಿದ್ದಾರೆ. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಅವರು ಮೃತಪಟ್ಟಿದ್ದಾರೆ, ಶವ ಪರೀಕ್ಷೆ ವರದಿಯಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿರುವುದಾಗಿ ತಿಳಿದುಬಂದಿದೆ ಎಂದು ಡಿಸಿಪಿ ವಿವೇಕ್ ಪ್ರಸಾದ್‌ ಹೇಳಿದ್ದಾರೆ.

ವಿಧವೆಯಾಗಿದ್ದ ನಾಗಮ್ಮ ಶೆಟ್ಟಿ ಮಗಳೊಂದಿಗೆ ವಾಸಿಸುತ್ತಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು