ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನಲ್ಲಿ ಎಎಸ್‌ಐ ಕೈ ಕತ್ತರಿಸಿದ ನಿಹಾಂಗ್‌ ಸಿಖ್ಖರ ಗುಂಪು 

Last Updated 12 ಏಪ್ರಿಲ್ 2020, 6:59 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬ್‌ನ ಪಟಿಯಾಲ ಜಿಲ್ಲೆಯಲ್ಲಿ ಭಾನುವಾರ ನಿಹಾಂಗ್‌ (ಶಸ್ತ್ರಗಳನ್ನು ಹೊಂದಿರುವ) ಸಿಖ್ಖರ ಗುಂಪೊಂದು ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌(ಎಎಸ್‌ಐ)ನ ಕೈ ಕತ್ತಿರಿಸಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ.

‘ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕರಿಂದ ಐದು ನಿಹಾಂಗ್‌ ಸಿಖ್ಖರ ಗುಂಪನ್ನು ಮಂಡಿ ಬೋರ್ಡ್‌ ಠಾಣೆ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆ ಬಳಿ ತಡೆದಿದ್ದಾರೆ. ಲಾಕ್‌ಡೌನ್‌ ಪಾಸ್‌ ತೋರಿಸುವಂತೆ ಗುಂಪಿಗೆ ಪೊಲೀಸರು ತಿಳಿಸಿದ್ದಾರೆ. ಆದರೆ, ತಪ್ಪಿಸಿಕೊಳ್ಳಲೆತ್ನಿಸಿದ ಗುಂಪು ಪೊಲೀಸರತ್ತ ವಾಹನ ನುಗ್ಗಿಸಲು ಯತ್ನಿಸಿದೆ. ನಂತರ ಪೊಲೀಸರ ಮೇಲೇ ದಾಳಿ ನಡೆಸಿದೆ,’ ಎಂದು ಪಟಿಯಾಲ ಜಿಲ್ಲಾ ಎಸ್‌ಪಿ ಮಂದೀಪ್‌ ಸಿಂಗ್‌ ಸಿದು ತಿಳಿಸಿದ್ಧಾರೆ.

‘ಘಟನೆಯಲ್ಲಿ ಎಎಸ್‌ಐ ಕೈ ಕತ್ತರಿಸಲಾಗಿದೆ. ಈ ವೇಳೆ ಇಬ್ಬರು ಪೊಲೀಸ್‌ ಅಧಿಕಾರಿಗಳಿಗೂ ಗಾಯಗಳಾಗಿವೆ. ಕೈ ಕತ್ತರಿಸಲ್ಪಟ್ಟ ಪೊಲೀಸ್‌ ಅಧಿಕಾರಿಯನ್ನು ಹರ್ಜೀತ್‌ ಸಿಂಗ್‌ ಎಂದು ಗುರುತಿಸಲಾಗಿದ್ದು, ಅವರನ್ನು ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅವರನ್ನು ಚಂಡೀಗಡದ ಪಿಜಿಐಎಂಇಆರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ,’ ಎಂದು ಮಂದೀಪ್‌ ಸಿಂಗ್‌ ತಿಳಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಡಿಜಿಪಿ ದಿನಕರ್‌ ಗುಪ್ತಾ, ‘ಘಟನೆಯು ದುರದೃಷ್ಟಕರ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು,’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT