ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಾಮುದ್ದೀನ್ ಪ್ರಕರಣ: ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಥಾಣೆಯ 25 ಮಂದಿ ಪತ್ತೆ

Last Updated 1 ಏಪ್ರಿಲ್ 2020, 10:05 IST
ಅಕ್ಷರ ಗಾತ್ರ

ಥಾಣೆ: ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿಯಲ್ಲಿ ಮಾ.13 ರಿಂದ ಮಾ.15ರವರೆಗೆ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರದ 25 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಥಾಣೆ ಜಿಲ್ಲೆಯ ಮುಂಬ್ರಾ ಪ್ರದೇಶದಿಂದ ಇವರನ್ನ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಬಹುತೇಕ ಮಂದಿಗೆ ಕೋವಿಡ್-19 ರೋಗ ತಗುಲಿದ್ದು ಈ ಪ್ರದೇಶ ಕೊರೊನಾ ವೈರಸ್‌ನ ಹಾಟ್‌ಸ್ಪಾಟ್‌ ಆಗಿಬಿಟ್ಟಿದೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಏಳೆಂಟು ವೈದ್ಯಾಧಿಕಾರಿಗಳ ತಂಡ ಮರ್ಕಜ್‌ನಲ್ಲಿ ಭಾಗಿಯಾದವರ ಪತ್ತೆ ಕಾರ್ಯ ಡೆಸುತ್ತಿದೆ.ಇಲ್ಲಿಯವರೆಗೆ ಮುಂಬ್ರಾದಲ್ಲಿರುವ ಎರಡು ಮದರಸಗಳಿಂದ 25 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಕೊರೊನಾ ಪ್ರಕರಣಗಳ ಪತ್ತೆ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿ ಡಾ.ಕೆ.ಟಿ ಕೇಂದ್ರೆ ಹೇಳಿದ್ದಾರೆ. ಈಗ ನಾವು ಪತ್ತೆ ಹಚ್ಚಿದ ವ್ಯಕ್ತಿಗಳಲ್ಲಿ ಯಾರೊಬ್ಬರಿಗೂ ಆರೋಗ್ಯ ಸಮಸ್ಯೆ ಇಲ್ಲ ಎಂದ ಹೇಳಿರುವ ಕೇಂದ್ರೆ, ಅಲ್ಲಿ ಭಾಗವಹಿಸಿರುವ ಎಲ್ಲ ಜನರನ್ನು ಪತ್ತೆ ಹಚ್ಚಿದ ನಂತರವೇ ಮುಂದಿನ ಕಾರ್ಯ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT