ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಪಾಕ್ನಿಂದ ಉಗ್ರರಿಗೆ ನೆರವು:ಲೆ.ಜನರಲ್ ಧಿಲ್ಲೋನ್

ನವದೆಹಲಿ: ಅಮರನಾಥಯಾತ್ರೆ ಮಾರ್ಗದಲ್ಲಿ ಭಯೋತ್ಪಾದನೆ ದಾಳಿ ನಡೆಸಲು ಪಾಕಿಸ್ತಾನ ಸೇನೆ ಉಗ್ರರಿಗೆ ನೆರವಾಗುತ್ತಿದೆ ಎಂದು ಭಾರತೀಯ ಸೇನೆ ಶುಕ್ರವಾರ ಗಂಭೀರ ಆರೋಪ ಮಾಡಿದೆ.
ಪಾಕಿಸ್ತಾನ ಸೇನೆಯ ಸಹಕಾರದೊಂದಿಗೆ ಭಯೋತ್ಪಾದಕರು ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ, ಈ ಮಾರ್ಗದಲ್ಲಿ ಯಾತ್ರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದು ಇದಕ್ಕೆ ಪೂರಕವಾಗಿ ಅಮರನಾಥಯಾತ್ರೆ ಮಾರ್ಗದಲ್ಲಿ ಸ್ಫೋಟಕಗಳು ಸೇರಿದಂತೆ ಸುಧಾರಣ ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೆ.ಜನರಲ್ ಕೆ.ಎಸ್. ಜೆ ಧಿಲ್ಲೋನ್ ಹೇಳಿದ್ದಾರೆ.
ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆಯ ಅಧಿಕಾರಿಗಳು ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
Chinar Corps Commander Lt General K J S Dhillon in Srinagar: An M-24 American sniper rifle with a telescope was also recovered from a terror cache along Shri Amarnath ji route pic.twitter.com/VLmkmN8iAd
— ANI (@ANI) August 2, 2019
ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ ಅಮರನಾಥಯಾತ್ರೆಯ ಮಾರ್ಗದ ಪ್ರದೇಶಗಳಲ್ಲಿ ಸೇನೆಯು ಕಳೆದು ಎರಡು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭೂಮಿಯಲ್ಲಿ ಹುದುಗಿಟ್ಟಿದ್ದ ಸ್ಫೋಟಕಗಳು ಮತ್ತು ಟೆಲಿಸ್ಕೋಪಿಕ್ 24 ಅಮೆರಿಕನ್ ರೈಫಲ್ ದೊರೆತಿದೆ. ಇದರ ಹಿಂದೆ ಪಾಕಿಸ್ತಾನ ಸೇನೆಯ ಕೈವಾಡ ಇರುವುದು ಸ್ಪಷ್ಟ ಎಂದು ಕೆ.ಎಸ್. ಜೆ ಧಿಲ್ಲೋನ್ ಹೇಳಿದ್ದಾರೆ.
ಇದೇ ವೇಳೆ ವಶಪಡಿಸಿಕೊಂಡಿರುವ ರೈಫಲ್ ಮತ್ತು ಸ್ಫೋಟಕಗಳನ್ನು ಪ್ರದರ್ಶನ ಮಾಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.