ಗುರುವಾರ , ಆಗಸ್ಟ್ 22, 2019
21 °C

ಕಾಶ್ಮೀರ ವಿಚಾರದಲ್ಲಿ ಭಾರತದ ನಿರ್ಧಾರ: ಪಾಕ್ ವಿದೇಶಾಂಗ ಇಲಾಖೆ ಟೀಕೆ

Published:
Updated:

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿ ರದ್ದತಿ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಇಲಾಖೆಯು, ಭಾರತದ ಏಕಪಕ್ಷೀಯ ನಿರ್ಧಾರವನ್ನು ಪಾಕಿಸ್ತಾನವು ಪ್ರಬಲವಾಗಿ ಖಂಡಿಸುತ್ತದೆ ಮತ್ತು ಭಾರತ ಸರ್ಕಾರದ ಘೋಷಣೆಗಳನ್ನು ತಿರಸ್ಕರಿಸುತ್ತದೆ ಎಂದು ಹೇಳಿದೆ.

‘ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರವು ವಿವಾದಿತ ಪ್ರದೇಶ ಎಂದು ವಿಶ್ವಮಟ್ಟದಲ್ಲಿ ಗುರುತಿಸಲಾಗಿದೆ. ಭಾರತ ಸರ್ಕಾರದ ಯಾವುದೇ ಏಕಪಕ್ಷೀಯ ನಿರ್ಧಾರವು ವಿಶ್ವಸಂಸ್ಥೆಯ ನಿರ್ಣಯದಂತೆ ಘೋಷಿಸಲಾಗಿರುವ ‘ವಿವಾದಿತ ಪ್ರದೇಶ’ ಎನ್ನುವ ಸ್ಥಾನಮಾನವನ್ನು ಬದಲಿಸಲಾರದು ಎಂದು ಹೇಳಿದೆ.

‘ಭಾರತ ಸರ್ಕಾರ ಇರಿಸಿರುವ ಈ ಹೆಜ್ಜೆಯನ್ನು ಜಮ್ಮು ಮತ್ತು ಕಾಶ್ಮೀರದ ಜನರು ಮತ್ತು ಪಾಕ್ ಸರ್ಕಾರ ಎಂದಿಗೂ ಒಪ್ಪುವುದಿಲ್ಲ’ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

Post Comments (+)