ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್ ಅಧ್ಯಕ್ಷರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ 

Last Updated 24 ಏಪ್ರಿಲ್ 2020, 7:08 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಪಂಚಾಯತಿ ರಾಜ್ ದಿನಾಚರಣೆ ಪ್ರಯುಕ್ತಪ್ರಧಾನಿ ನರೇಂದ್ರ ಮೋದಿ ಪಂಚಾಯತ್ ಅಧ್ಯಕ್ಷರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ.

ಮೋದಿ ಜತೆ ಪಂಚಾಯತಿ ರಾಜ್ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡಾ ಉಪಸ್ಥಿತರಿದ್ದರು.

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮೋದಿ ಮಾತು

*ದೇಶದಾದ್ಯಂತವಿರುವ ಪಂಚಾಯತ್ ಅಧ್ಯಕ್ಷರೊಂದಿಗೆ ಮಾತನಾಡಿದ ಮೋದಿ, ಈ ಬಿಕ್ಕಟ್ಟಿನ ಸಂದರ್ಭದಲ್ಲಿಯೂಎಲ್ಲರೂ ಮುತುವರ್ಜಿ ವಹಿಸಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ನನ್ನ ಕನಸು ಗ್ರಾಮ ಸ್ವರಾಜ್ಯ ಎಂದು ಮಹಾತ್ಮಗಾಂಧಿ ಹೇಳುತ್ತಿದ್ದರು.

* ಗೌರವಿಸಿ, ಅದೇ ವೇಳೆ ಸಂದೇಹವೂ ಇರಲಿ.ಎರಡು ಗಜ ದೂರ (ಅಂತರ ಕಾಯ್ದುಕೊಳ್ಳಿ).ನಿಮ್ಮ ಮುಖವನ್ನು ಮುಚ್ಚಿಕೊಳ್ಳಿ, ಅದು ಗಮ್ಚ (ಶಾಲಿನ ರೀತಿಯ ವಸ್ತ್ರ) ಆದರೂ ಸಾಕು.

* ವದಂತಿಗಳಿಗೆ ಕಿವಿಗೊಡಬೇಡಿ: ಕೊರೊನಾ ನಿಯಂತ್ರಿಸಲು ಗ್ರಾಮಗಳು ಈಗಾಗಲೇ ಸಾಕಷ್ಟು ಕ್ರಮಕೈಗೊಂಡಿವೆ, ಜನರು ಕಷಾಯ ಕುಡಿಯಬೇಕು. ಆಯುಷ್ ಸಚಿವಾಲಯದ ನಿಯಮಾವಳಿಗಳನ್ನೂ ಗಮನಿಸಿ, ಜನರು ಆರೋಗ್ಯ ಸೇತು ಮೊಬೈಲ್ ಆ್ಯಪ್ ಬಳಸಿ.

* ನಾವು ದೊಡ್ಡ ಸಮಸ್ಯೆಯೊಂದನ್ನು ಎದುರಿಸುತ್ತಿದ್ದೇವೆ, ಕಷ್ಟದಲ್ಲಿದ್ದೇವೆ. ಆದರೆ ಭಾರತದ ಪರಿಶ್ರಮಗಳು ನಮ್ಮನ್ನು ಸರಿಯಾದ ದಿಶೆಯತ್ತ ಕೊಂಡೊಯ್ಯುತಿದೆ.

* ಕೊರೊನಾವೈರಸ್‌ ವಿರುದ್ಧ ಹೋರಾಟದಲ್ಲಿ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಭಾರತದ ಗ್ರಾಮಗಳು 'ದೋ ಗಜ್ ದೂರಿ' (ಎರಡು ಗಜ ಅಂತರ) ಎಂಬ 'ಸೂತ್ರ'ವನ್ನು ನೀಡಿದ್ದವು.

* ಕೊರೊನಾವೈರಸ್ ಪಿಡುಗು ನಮಗೆ ಕಲಿಸಿದ ಪಾಠ ನಾವು ಸ್ವಾವಲಂಬಿಗಳಾಗಬೇಕು ಎಂಬುದು.

* ಕೊರೊನಾವೈರಸ್ ನಮಗೆ ಹಲವು ಸವಾಲುಗಳನ್ನೊಡಿದೆ. ನಾವು ನಮ್ಮ ಜೀವನದಲ್ಲಿ ಎದುರಾಗುವ ಸಂದರ್ಭಗಳಿಂದ ಕಲಿಯಬೇಕಿದೆ. ನಾವು ಏನು ಮಾಡಬೇಕು ಮೊದಲಾದ ಪಾಠಗಳನ್ನು ಕೊರೊನಾ ನಮಗೆ ಕಲಿಸಿದೆ. ನಾವು ಹೇಗೆ ಮುಂದೆ ಸಾಗಬೇಕು ಎಂಬುದನ್ನು ಮತ್ತು ಪ್ರೀತಿಯನ್ನೂ ಅದು ನಮಗೆ ಕಲಿಸಿದೆ

* 5-6 ವರ್ಷಗಳ ಸತತ ಪ್ರಯತ್ನದಿಂದ ಎಲ್ಲ ಗ್ರಾಮಗಳಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ ಸಿಕ್ಕಿದೆ, ದೇಶದಾದ್ಯಂತ ವೇಗವಾದ ಸಂಪರ್ಕ ಮತ್ತು ಮೂಲೆ ಮೂಲೆಗೂ ಮೊಬೈಲ್ ಫೋನ್ ಸಂಪರ್ಕ ಸಿಗುವಂತೆ ಮಾಡಲಾಗಿದೆ.

* ಇದೀಗ 1.25 ಲಕ್ಷ ಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ್ ತಲುಪಿದೆ. ಇಷ್ಟೇ ಅಲ್ಲ ಗ್ರಾಮಗಳಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳ ಸಂಖ್ಯೆಯೂ ಮೂರು ಲಕ್ಷ ದಾಟಿದೆ.

* ಇ- ಗ್ರಾಮ್‌ಸ್ವರಾಜ್ಯ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಲೋಕಾರ್ಪಣೆ ಮಾಡಿದ ಮೋದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT