ಸೋಮವಾರ, ಏಪ್ರಿಲ್ 6, 2020
19 °C

ಬಿಜೆಪಿಯ ಒಡೆದಾಳುವ ತಂತ್ರ ಯಶಸ್ಸು ಕಾಣುವುದಿಲ್ಲ: ಮಧ್ಯಪ್ರದೇಶ ಕಾಂಗ್ರೆಸ್ ಘಟಕ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ಭೋಪಾಲ್‌: ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ನೊಂದಿಗಿನ ದೀರ್ಘಕಾಲದ ನಂಟು ಕಳಚಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, 22 ಶಾಸಕರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿಯನ್ನು ದೂರಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಘಟಕವು, ಬಿಜೆಪಿಯ ಒಡೆದು ಆಳುವ ನೀತಿಯು ಯಶಸ್ಸು ಕಾಣುವುದಿಲ್ಲ. ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದೆ ಎಂದು ಹೇಳಿದೆ.

ಒಟ್ಟಾರೆ ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ನಾಯಕತ್ವದ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಒಗ್ಗಟ್ಟು ಮತ್ತು ಭದ್ರವಾಗಿದೆ. ಬಿಜೆಪಿಯ ಒಡೆದು ಆಳುವ ನೀತಿಯು ಎಂದಿಗೂ ಯಶಸ್ಸು ಕಾಣುವುದಿಲ್ಲ. ನಮ್ಮ ಎಲ್ಲ ಶಾಸಕರು ಕೂಡ  ರಾಜ್ಯದ ಜನರ ಬಗ್ಗೆ ಹೊಣೆಗಾರಿಗೆ, ಕರ್ತವ್ಯ ಮತ್ತು ನೈತಿಕತೆಗೆ ಬದ್ಧರಾಗಿದ್ದಾರೆ ಎಂದು ಟ್ವೀಟ್ ಮಾಡಿದೆ.

ಹೋಟೆಲ್‌ನಲ್ಲಿ ತಂಗಿದ್ದ ಮತ್ತು  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆಲವು ರೆಬೆಲ್ ಶಾಸಕರನ್ನು ಸಮಾಧಾನ ಪಡಿಸಿ ಕರೆತರುವಂತೆ ಮುಖಂಡರಾದ ಸಜ್ಜನ್‌ ಸಿಂಗ್‌ ವರ್ಮಾ ಮತ್ತು ಗೋವಿಂದ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಮಂಗಳವಾರ ಬೆಂಗಳೂರಿಗೆ ಕಳುಹಿಸಿತ್ತು.

ಬಹುತೇಕ ರೆಬಲ್ ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಆಪ್ತರು ಮತ್ತು ಪಕ್ಷದೊಳಗೆ ಸಿಂಧಿಯಾ ಅವರನ್ನು ಕಡೆಗಣಿಸಿದ್ದಕ್ಕೆ ಬೇಸರಗೊಂಡಿದ್ದರು. 2018ರಲ್ಲಿ ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಯಾದಾಗಿನಿಂದಲೂ ಒಳಗೊಳಗೆ ಭಿನ್ನಾಭಿಪ್ರಾಯ ತಲೆದೋರಲು ಕಾಂಗ್ರೆಸ್ ಸಾಕ್ಷಿಯಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು