ಸೋಮವಾರ, ಆಗಸ್ಟ್ 2, 2021
27 °C

ಕೋರೊನಿಲ್‌ ಮಾರಾಟಕ್ಕೆ ನಿರ್ಬಂಧ ಇಲ್ಲ: ಆಯುಷ್‌ ಸಚಿವಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹರಿದ್ವಾರ/ನವದೆಹಲಿ: ಯೋಗಗುರು ರಾಮದೇವ್‌ ಪತಂಜಲಿ ಆಯುರ್ವೇದದಿಂದ  ಬಿಡುಗಡೆಯಾದ ಕೋರೋನಿಲ್‌ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಆಯುಷ್‌ ಸಚಿವಾಲಯವು ಬುಧವಾರ ಸ್ಪಷ್ಟಪಡಿಸಿದೆ. 

ಒಂದು ಉತ್ಪನ್ನವಾಗಿ ಅದನ್ನು ಮಾರಾಟ ಮಾಡಬಹುದು. ಆದರೆ, ಕೋವಿಡ್‌ ನಿರ್ಮೂಲನಾ ಔಷಧಿ  ಎಂದು ಹೇಳಿಕೊಳ್ಳುವಂತಿಲ್ಲ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಾಗಿ ಮಾರಾಟ ಮಾಡಬಹುದು ಎಂದು ಸಚಿವಾಲಯವು ತಿಳಿಸಿದೆ. 

ಈ ಹಿಂದೆ ಕೊರೊನಿಲ್‌ ಕೋವಿಡ್‌ನಿಂದ ಗುಣಮುಖ ಮಾಡಲು ಬಿಡುಗಡೆಯಾದ ಔಷಧವೆಂದೇ ಬಾಬಾ ರಾಮ್‌ದೇವ್‌ ಹೇಳಿಕೊಂಡಿದ್ದರು. ಆದರೆ, ಈಗ ಕೋವಿಡ್‌ ‌ರೋಗವನ್ನು ಸಮರ್ಪಕವಾಗಿ ನಿರ್ವಹಿಸುವ ಒಂದು ಉತ್ಪನ್ನ ಎಂದು ಹೇಳಿದ್ದಾರೆ. 

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್‌, ’ಕೋವಿಡ್‌ ವಿರುದ್ಧ ಹೋರಾಡಲು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಈ ಕೊರೊನಿಲ್‌ ಔಷಧವು ಒದಗಿಸುತ್ತದೆ. ಈ ಬಗ್ಗೆ ಸಚಿವಾಲಯವು ಮೆಚ್ಚುಗೆಯ ನುಡಿಗಳನ್ನಾಡಿದೆ. ದೇಶದ ಎಲ್ಲ ಕಡೆಗಳಲ್ಲಿಯೂ ಈ ಔಷಧ ಲಭ್ಯವಿರಲಿದೆ’ ಎಂದು ಹೇಳಿದ್ದಾರೆ. 

ಹಲವು ಹಂತದ ಅನುಮೋದನೆಯ ನಂತರ ಈ ಔಷಧ ಸೇವನೆಯಿಂದ ಏಳು ದಿನಗಳಲ್ಲಿ ಕೋವಿಡ್‌ ರೋಗಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಪತಂಜಲಿ ಹೇಳಿಕೊಂಡಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು