ಶನಿವಾರ, ಜನವರಿ 25, 2020
22 °C

ಕಾನೂನು ವ್ಯವಸ್ಥೆ ಬಗ್ಗೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ: ಅರವಿಂದ ಕೇಜ್ರಿವಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Arvind Kejriwal

ನವದೆಹಲಿ: ತೆಲಂಗಾಣದ ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿರುವುದನ್ನು ದೇಶದ ಜನರು ಸಂಭ್ರಮಿಸುತ್ತಿದ್ದಾರೆ. ಜನರು ಈ ರೀತಿ ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಂಡಿರುವುದು ತಲ್ಲಣವುಂಟು ಮಾಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಹೈದರಾಬಾದ್ ಘಟನೆ ಬಗ್ಗೆ ಜನರಿಗೆ ಖುಷಿಯಾಗಿದೆ. ಕಾನೂನು ವ್ಯವಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಂಡಿರುವುದು ಚಿಂತಿಸಬೇಕಾದ ವಿಷಯ. ಜನರು ಮತ್ತೊಮ್ಮೆ ಈ ವ್ಯವಸ್ಥೆಯ ಮೇಲೆ ನಂಬಿಕೆ ಇಡಲು ಮತ್ತು ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸಲು ನಾವೆಲ್ಲರೂ ಸೇರಿ ನಮ್ಮ ಕಾನೂನು ವ್ಯವಸ್ಥೆ ಮತ್ತು ತನಿಖಾ ರೀತಿಯನ್ನು ಬಲಪಡಿಸಬೇಕು ಎಂದಿದ್ದಾರೆ ಕೇಜ್ರಿವಾಲ್. 

ಇದನ್ನೂ ಓದಿತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಎನ್‌ಕೌಂಟರ್

ತೆಲಂಗಾಣದಲ್ಲಿ ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಎನ್‌ಕೌಂಟರ್ ಮಾಡಿದ್ದರು.

ಈ ಬಗ್ಗೆ ಟ್ವೀಟಿಸಿದ ಸಂಸದ ಶಶಿ ತರೂರ್, ನೀತಿಯನ್ನು ಒಪ್ಪುತ್ತೇನೆ ಆದರೆ ನಾವು ಮತ್ತಷ್ಟು ತಿಳಿದುಕೊಳ್ಳಬೇಕಿದೆ. ಉದಾಹರಣೆಗೆ ದುಷ್ಕರ್ಮಿಗಳು ಶಸ್ತ್ರಾಸ್ತ್ರ ಹೊಂದಿದ್ದರೆ  ಪೊಲೀಸರು ಗುಂಡು ಹಾರಿಸಿರುವುದನ್ನು ನಾವು ಒಪ್ಪಬಹುದು.  ಮಾಹಿತಿಗಳು ಲಭಿಸುವ ಮುನ್ನವೇ  ನಾವು ಖಂಡಿಸಲು ಹೋಗಬಾರದು. ಆದರೆ ನ್ಯಾಯಾಂಗ ಹತ್ಯೆಗಳನ್ನು ಕಾನೂನು ಒಪ್ಪುವುದಿಲ್ಲ ಎಂದಿದ್ದಾರೆ.

ಇದನ್ನು ಓದಿಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಪೊಲೀಸರಿಗೆ ರಾಜಕೀಯ ನಾಯಕರ ಶ್ಲಾಘನೆ

ಹೈದರಾಬಾದ್ ಎನ್‌ಕೌಂಟರ್‌ನ್ನು ಖಂಡಿಸಿದ  ಮಾಜಿ ಸಚಿವೆ, ಬಿಜೆಪಿ ನಾಯಕಿ ಮೇನಕಾ ಗಾಂಧಿ ಇಲ್ಲಿನಡೆದಿರುವ ಘಟನೆ  ಬೆಚ್ಚಿಬೀಳಿಸುವಂತದ್ದು. ಸಾಯಿಸಬೇಕು ಎಂದು ಬಯಸಿದರೆ  ನೀವು  ಅವರನ್ನು ಸಾಯಿಸುವಂತಿಲ್ಲ. ನೀವು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಅವರಿಗೆ (ಆರೋಪಿಗಳಿಗೆ) ಕಾನೂನು ಗಲ್ಲು ಶಿಕ್ಷೆ ವಿಧಿಸುತ್ತಿತ್ತು ಎಂದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು