ಶನಿವಾರ, ಫೆಬ್ರವರಿ 22, 2020
19 °C

ಕರ್ತಾರ್‌ಪುರ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Kartarpur Sahib gurdwara

ನವದೆಹಲಿ: ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಹೆಚ್ಚಳವಾಗಿದೆ. ಪಾಕಿಸ್ತಾನದ ಗಡಿಪ್ರದೇಶದಿಂದ ಇಲ್ಲಿಗೆ ಆಗಮಿಸುತ್ತಿರುವ ಯಾತ್ರಿಕರ ಸಂಖ್ಯೆಯಲ್ಲಿ ಗಣನೀಯ  ಹೆಚ್ಚಳ ಕಂಡುಬಂದಿದೆ.

ನವೆಂಬರ್ 24 ಭಾನುವಾರದಂದು ಸರಿಸುಮಾರು 1,800 ಮಂದಿ ಗಡಿ ದಾಟಿ ಕರ್ತಾರ್‌ಪುರಕ್ಕೆ ಬರಲಿದ್ದಾರೆ ಎಂದು ಇಲ್ಲಿನ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಕರ್ತಾರ್‌ಪುರ ಗುರುದ್ವಾರ ಸಾಕಾರ: ಪಾಕ್ ಪ್ರಧಾನಿಯಿಂದ ನಾಳೆ ಉದ್ಘಾಟನೆ

ನವೆಂಬರ್ 17ರಂದು  671 ಮಂದಿ ಕರ್ತಾರ್‌ಪುರಕ್ಕೆ ಭೇಟಿ ನೀಡಿದ್ದರು. ಆದರೆ ಮುಂದಿನ ವಾರ ಇದರ ಮೂರು ಪಟ್ಟು ಯಾತ್ರಿಕರು ಬರಲಿದ್ದಾರೆ ಎಂದಿದ್ದಾರೆ ಅಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿಯಿರುವ ಜನರು.

ಸರ್ಕಾರಿ ಅಂಕಿಅಂಶಗಳ ಪ್ರಕಾರ ಸಿಖ್ ಧಾರ್ಮಿಕ ಹಬ್ಬ ಮತ್ತು ವಾರಾಂತ್ಯಗಳಲ್ಲಿ ಯಾತ್ರಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ.  ನವೆಂಬರ್ 9ರಂದು ಕಾರಿಡಾರ್ ಉದ್ಘಾಟನೆಯಾದಾಗ 562 ಭಾರತೀಯರು ಇಲ್ಲಿ ಭೇಟಿ ನೀಡಿದ್ದರು.

ಅದೇ ವೇಳೆ ಗುರುನಾನಕ್ ಅವರ 550ನೇ ಜಯಂತಿ ಆಚರಣೆಯಾದ ನವೆಂಬರ್ 12ರಂದು ಭಾರತದಿಂದ 546 ಮಂದಿ ಇಲ್ಲಿಗೆ  ಆಗಮಿಸಿದ್ದರು.

ಇದನ್ನೂ ಓದಿ: ಸೌಹಾರ್ದದ ಹೊಸ ಶಕೆಗೆ ಕರ್ತಾರ್‌ಪುರ ಮುನ್ನುಡಿಯಾಗಲಿ

ಅಂಕಿ ಅಂಶಗಳ ಪ್ರಕಾರ ನವೆಂಬರ್  10 ಭಾನುವಾರ ಇಲ್ಲಿಗೆ 229  ಮಂದಿ ಭೇಟಿ ನೀಡಿದ್ದು ನವೆಂಬರ್ 11ರಂದು 122,  ನವೆಂಬರ್ 13ರಂದು 279, ನವೆಂಬರ್ 14ರಂದು  241, ನವೆಂಬರ್ 15ರಂದು 161 ಮತ್ತು ನವೆಂಬರ್ 16ರಂದು 40 ಮಂದಿ ಭೇಟಿ ನೀಡಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು