ಗುರುವಾರ , ಏಪ್ರಿಲ್ 15, 2021
19 °C
ಭಾರತ ಮಾತೆಯನ್ನು ಕೆಣಕ ಬಂದವರಿಗೆ ತಕ್ಕ ಶಾಸ್ತಿಯಾಗಿದೆ ಎಂದ ಪ್ರಧಾನಿ

ಭಾರತದ ಒಂದಿಂಚು ಭೂಮಿ ಮೇಲೆ ಕಣ್ಣಿಡಲೂ ಯಾರಿಂದಲೂ ಆಗದು: ಪ್ರಧಾನಿ ಮೋದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Narendra Modi

ನವದೆಹಲಿ: ‘ನಮ್ಮ ಭೂಮಿಯ ಒಂದಿಂಚಿನ ಮೇಲೂ ಕಣ್ಣಿಡಲು ಯಾರಿಗೂ ಸಾಧ್ಯವಿಲ್ಲ. ಹಾಗೆ ಮಾಡುವ ಸಾಮರ್ಥ್ಯ ಇಂದು ನಮ್ಮಲ್ಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

ಚೀನಾದೊಂದಿಗಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಕರೆಯಲಾದ ಸರ್ವಪಕ್ಷ ಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಏಕ ಕಾಲದಲ್ಲಿ ಹಲವು ಕಡೆ ಸಂಚರಿಸಿ ದಾಳಿ ನಡೆಸಬಲ್ಲ ಸಾಮರ್ಥ್ಯ ಭಾರತದ ಸಶ್ತ್ರ ಪಡೆಗಳಿಗೆ ಇದೆ’ ಎಂದು ಹೇಳಿದರು.

‘ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಲು ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಸಶ್ತ್ರ ಪಡೆಗಳು ಮಾಡಲಿವೆ. ಅದು ಸೇನಾ ನಿಯೋಜನೆ ಇರಬಹುದು, ಭೂಮಿ ಮೇಲಿನ ಅಥವಾ ಸಾಗರದಲ್ಲಿನ ಕ್ರಮ ಯಾವುದೇ ಆಗಿರಬಹುದು’ ಎಂದು ಮೋದಿ ಹೇಳಿದರು.

ಇದನ್ನೂ ಓದಿ: 

‘ಅವರು (ಚೀನಾ) ನಮ್ಮ ಗಡಿಯೊಳಕ್ಕೆ ನುಸುಳಿ ಯಾವುದೇ ಪೋಸ್ಟ್ ಅನ್ನು ವಶಪಡಿಸಿಕೊಂಡಿಲ್ಲ. ನಮ್ಮ 20 ಮಂದಿ ವೀರ ಯೋಧರು ಹುತಾತ್ಮರಾಗಿದ್ದಾರೆ. ಆದರೆ, ಭಾರತ ಮಾತೆಯನ್ನು ಕೆಣಕಲು ಬಂದವರಿಗೆ ತಕ್ಕ ಪಾಠ ಕಲಿಸಲಾಗಿದೆ’ ಎಂದು ಮೋದಿ ಹೇಳಿದ್ದಾರೆ.

‘ನಮ್ಮ ಗಡಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಕಳೆದ ಕೆಲವು ವರ್ಷಗಳಿಂದ ಗಡಿ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಮ್ಮ ಸಶಸ್ತ್ರ ಪಡೆಗಳಿಗೆ, ಯುದ್ಧವಿಮಾನಗಳಿಗೆ, ಅತ್ಯಾಧುನಿಕ ಹೆಲಿಕಾಪ್ಟರ್‌ಗಳಿಗೆ ಹಾಗೂ ಕ್ಷಿಪಣಿ ವ್ಯವಸ್ಥೆಗಳ ಅಗತ್ಯಕ್ಕನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: 

‘ಇಲ್ಲಿವರೆಗೆ ಎಂದಿಗೂ ಪ್ರಶ್ನಿಸದ, ತಡೆಯದಂತಹವರನ್ನೇ ಈಗ ನಮ್ಮ ಯೋಧರು ತಡೆದು ನಿಲ್ಲಿಸಿದ್ದಾರೆ ಮತ್ತು ಎಚ್ಚರಿಕೆ ನೀಡಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.

ನಮ್ಮ ಯೋಧರ ಮೇಲೆ ಇಡೀ ದೇಶಕ್ಕೇ ಅತೀವ ವಿಶ್ವಾಸವಿದೆ. ಇಡೀ ದೇಶ ಅವರೊಂದಿಗಿದೆ ಎಂದೂ ಮೋದಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು