1.6 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ, 2 ಕೋಟಿ ಉದ್ಯೋಗವಕಾಶ ಎಲ್ಲಿ?: ಖರ್ಗೆ

7

1.6 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ, 2 ಕೋಟಿ ಉದ್ಯೋಗವಕಾಶ ಎಲ್ಲಿ?: ಖರ್ಗೆ

Published:
Updated:

ಕೋಲ್ಕತ್ತ:  ಪ್ರತಿ ವರ್ಷ 2 ಕೋಟಿ ಉದ್ಯೋಗವಕಾಶ ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ 1.6 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಜನರಿಗೆ ಕೆಲಸವಿಲ್ಲ. ಆದರೆ ಕೇಂದ್ರ ಸರ್ಕಾರ 2019ರ ಚುನಾವಣೆ ಬಗ್ಗೆ ಯೋಚಿಸುತ್ತಿದೆ ಎಂದು ಕೋಲ್ಕತ್ತದಲ್ಲಿ ನಡೆಯುತ್ತಿರುವ ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರ‍್ಯಾಲಿಯಲ್ಲಿ ಸೋನಿಯಾ ಗಾಂಧಿಯವರ ಸಂದೇಶವನ್ನು ಓದಿ ಹೇಳಿದ ಖರ್ಗೆ, ಮುಂಬರುವ ಚುನಾವಣೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಮೂಡುವಂತೆ ಮಾಡಲಿದೆ. ಈ ರ‍್ಯಾಲಿ ಮೋದಿ ಸರ್ಕಾರದ ವಿರುದ್ಧ ಹೋರಾಡುವ ನಾಯಕರನ್ನು ಒಟ್ಟು ಮಾಡಿದೆ ಎಂದಿದ್ದಾರೆ.

ಇದನ್ನೂ ಓದಿ: ಮೋದಿಯನ್ನು ಮನೆಗೆ ಕಳುಹಿಸಿ ದೇಶವನ್ನು ರಕ್ಷಿಸಿ: ಎಂ.ಕೆ ಸ್ಟಾಲಿನ್

ಸೀಟು ಹಂಚಿಕೆ ಕಠಿಣ ಕೆಲಸ: ಎಚ್‍ಡಿ ದೇವೇಗೌಡ
ವಿವಿಧ ರಾಜ್ಯಗಳಲ್ಲಿ ಸೀಟು ಹಂಚುವ ಕೆಲಸ ಕಠಿಣ ಕಾರ್ಯವಾಗಿದೆ. ಇದನ್ನು ನಾಯಕರೇ ನಿರ್ಧರಿಸುವಂತಾಗಬೇಕು. ನಮ್ಮಲ್ಲೀಗ ಜೆಪಿ ಅಥವಾ ಆಚಾರ್ಯ ಕೃಪಲಾನಿಯಂತವರು ಇಲ್ಲ. ಮೈತ್ರಿ ಸರ್ಕಾರ ಯಾವ ರೀತಿ ಮುಂದೆ ಸಾಗುತ್ತದೆ ಎಂಬುದರ ಬಗ್ಗೆ ನಾವು ಜನರಿಗೆ ವಿಶ್ವಾಸ ನೀಡಬೇಕು. ಇಲ್ಲಿ ಮೋದಿಗೆ ತಕ್ಕ ಉತ್ತರ ನೀಡುವುದಕ್ಕಾಗಿ ನಾಯಕರೆಲ್ಲರೂ ಒಗ್ಗೂಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಇದನ್ನೂ ಓದಿ: ಈ ಪ್ರಧಾನಿ ಕೆಲಸ ಮಾಡುವ ಪ್ರಧಾನಿ ಅಲ್ಲ, ಪ್ರಚಾರ ಬಯಸುವ ಪ್ರಧಾನಿ: ನಾಯ್ಡು

ಉತ್ತರ ಪ್ರದೇಶದಲ್ಲಿ ಎಸ್‍ಪಿ-ಬಿಎಸ್‍ಪಿ ಮೈತ್ರಿ ಘೋಷಣೆ ಆದರ ಕೂಡಲೇ ಆರೋಪ ಪಟ್ಟಿ ದಾಖಲಾಯಿತು. ಕೇಂದ್ರ ಸರ್ಕಾರ ತಮ್ಮ ಅಧಿಕಾರ ಬಳಸಿ ವಿಪಕ್ಷ ನಾಯಕರ ಮೇಲೆ ಆರೋಪ ಮಾಡುತ್ತಿದೆ ಎಂದಿದ್ದಾರೆ ಗೌಡರು.

ಇದನ್ನೂ ಓದಿ: ಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು: ಯಶವಂತ್ ಸಿನ್ಹಾ 

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !