ಸೋಮವಾರ, ಮಾರ್ಚ್ 30, 2020
19 °C

ದೆಹಲಿ ಘರ್ಷಣೆ ಕುರಿತು ಸಾರ್ವಜನಿಕರಿಂದ ಸಾಕ್ಷ್ಯ ಕೇಳಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಈಶಾನ್ಯಾ ದೆಹಲಿಯಲ್ಲಿ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೂ ತಮ್ಮೊಂದಿಗೆ  ಹಂಚಿಕೊಳ್ಳುವಂತೆ ದೆಹಲಿ ಪೊಲೀಸರು ಸಾರ್ವಜನಿಕರು ಮತ್ತು ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ.  

ಘರ್ಷಣೆಗೆ ಕಾರಣರಾದ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಸಾರ್ವಜನಿಕರು ತಮ್ಮ ಬಳಿ ಇರುವ ವಿಡಿಯೊಗಳನ್ನು ಹಂಚಿಕೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ: 

‘ಫೆ. 23ರಿಂದ ದೆಹಲಿಯಲ್ಲಿ ಘರ್ಷಣೆಗಳು ಸಂಭವಿಸಿವೆ. ಈ ಘರ್ಷಣೆಗೆ ಸಾಕ್ಷಿಯಾದ ನಾಗರಿಕರು, ಮುಖ್ಯವಾಗಿ ಮಾಧ್ಯಮದವರು ತಮ್ಮ ಬಳಿ ಇರುವ ಮಾಹಿತಿಯನ್ನು ಅಥವಾ ತಮ್ಮ ಫೋನ್‌, ಕ್ಯಾಮೆರಾಗಳ ಮೂಲಕ ಸೆರೆ ಹಿಡಿದ, ದೃಶ್ಯ, ವಿಡಿಯೊಗಳನ್ನು ಮುಂದೆ ಬಂದು ಹಂಚಿಕೊಳ್ಳಬಹುದು. ಏಳು ದಿನಗಳ ಒಳಗಾಗಿ ನಮಗೆ ಮಾಹಿತಿ ತಲುಪಿಸಿ. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು,’ ಎಂದೂ  ಎಂದು ಪೊಲೀಸರು ತಿಳಿಸಿದ್ದಾರೆ.   

ಮಂಗಳೂರು ಪೊಲೀಸರ ನಡೆ 

ಮಂಗಳೂರಿನಲ್ಲಿ ಡಿಸೆಂಬರ್‌ನಲ್ಲಿ ನಡೆದ ಸಿಎಎ ವಿರೋಧಿ ಹೋರಾಟದ ವೇಳೆ ಘರ್ಷಣೆ ಸಂಭವಿಸಿತ್ತು. ಈ ವೇಳೆ ಇಬ್ಬರು ಗೋಲಿಬಾರ್‌ಗೆ ಬಲಿಯಾಗಿದ್ದರು. ಗಲಭೆ ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದ ಪೊಲೀಸರು ಇದೇ ರೀತಿ ಟ್ವಿಟರ್‌ನಲ್ಲಿ ಜನರಿಂದ ಸಾಕ್ಷ್ಯ ಕೋರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು