ಪ್ರಕಾಶ್‌ ರೈಗೆ ಕೇಜ್ರಿವಾಲ್‌ ಬೆಂಬಲ

7

ಪ್ರಕಾಶ್‌ ರೈಗೆ ಕೇಜ್ರಿವಾಲ್‌ ಬೆಂಬಲ

Published:
Updated:

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಇತ್ತೀಚೆಗೆ ಬಹಿರಂಗ ಪಡಿಸಿದ್ದ ನಟ ಪ್ರಕಾಶ್ ರೈ, ಗುರುವಾರ ಎಎಪಿ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. 

ಭಾರತೀಯ ಜನತಾ ಪಕ್ಷ(ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹಲವು ಸಂದರ್ಭಗಳಲ್ಲಿ ವಾಗ್ದಾಳಿ ನಡೆಸಿರುವ ಪ್ರಕಾಶ್‌ ರೈ, ಕೇಜ್ರಿವಾಲ್‌ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಹಲವು ವಿಚಾರಗಳನ್ನು ಚರ್ಚಿಸಿದರು. ‌‌

ಇದನ್ನೂ ಓದಿ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪ್ರಕಾಶ್‌ ರೈ ಕಣಕ್ಕೆ

’ಪ್ರಕಾಶ್‌ ರಾಜ್‌ರಂತಹ ವ್ಯಕ್ತಿಗಳು ಸಂಸತ್ತಿಗೆ ಪ್ರವೇಶ ಪಡೆಯಬೇಕು. ಎಎಪಿ ನಿಮಗೆ ಪೂರ್ಣ ಬೆಂಬಲ ನೀಡುತ್ತದೆ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿಮ್ಮ ನಿರ್ಧಾರವನ್ನು ಒಪ್ಪುತ್ತೇನೆ. ಸಂಸತ್ತಿನಲ್ಲಿ ಸ್ವತಂತ್ರ ಮತ್ತು ನಿಷ್ಪಕ್ಷಪಾತವಾದ ಧ್ವನಿಯ ಅಗತ್ಯಿದೆ’ ಎಂದು ಕೇಜ್ರಿವಾಲ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ರಾಜಕೀಯ ಪ್ರಯಾಣದಲ್ಲಿ ಬೆಂಬಲ ನೀಡಿರುವ ಅರವಿಂದ ಕೇಜ್ರಿವಾಲ್‌ ಮತ್ತು ಆಮ್‌ ಆದ್ಮಿ ಪಕ್ಷಕ್ಕೆ ಪ್ರಕಾಶ್‌ ರೈ ಧನ್ಯವಾದ ತಿಳಿಸಿದ್ದಾರೆ. ಎಲ್ಲ ಉತ್ತಮ ವ್ಯಕ್ತಿಗಳೂ ರಾಜಕೀಯಕ್ಕೆ ಬರಬೇಕು ಎನ್ನುವ ಮೂಲಕ ಎಎಪಿ ಬೆಂಬಲ ವ್ಯಕ್ತಪಡಿಸಿದೆ. ’ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅವರ ತಂಡ ಅನುಸರಿಸಿದ ಕ್ರಮಗಳ ಕುರಿತು ಹಂಚಿಕೊಳ್ಳುವಂತೆ ಕೋರಿದೆ..’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಬೆಂಗಳೂರು ಸೆಂಟ್ರಲ್‌, ಸಂಸತ್ತಿನಲ್ಲಿ ಸಿಟಿಜನ್ಸ್‌ವಾಯ್ಸ್‌ ಹಾಗೂ ಸಂಸತ್ತಿನಲ್ಲೂ ಜಸ್ಟ್‌ಆಸ್ಕಿಂಗ್‌ ಹ್ಯಾಷ್‌ಟ್ಯಾಗ್‌ಗಳನ್ನು ಮುಂದುವರಿಸಿದ್ದಾರೆ. 

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ನಂತರದಲ್ಲಿ ಪ್ರಕಾಶ್‌ ರೈ ಸಾಮಾಜಿಕ ನ್ಯಾಯ, ಸಮಸ್ಯೆ ಹಾಗೂ ಸರ್ಕಾರದ ಧೋರಣೆಗಳ ಕುರಿತು ಹೆಚ್ಚು ಸಕ್ರಿಯರಾಗಿ ಪ್ರತಿಕ್ರಿಯಿಸುತ್ತಿದ್ದು, ರಾಜಕೀಯ ರಂಗ ಪ್ರವೇಶಿಸುವ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 12

  Angry

Comments:

0 comments

Write the first review for this !