Dad My Forever Hero: ಪ್ರಣಯ್‍ಗೆ ಭಾವನಾತ್ಮಕ ಶುಭಾಶಯ

7

Dad My Forever Hero: ಪ್ರಣಯ್‍ಗೆ ಭಾವನಾತ್ಮಕ ಶುಭಾಶಯ

Published:
Updated:

ಹೈದರಾಬಾದ್‌: ತೆಲಂಗಾಣದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದ ಪ್ರಣಯ್ ಅವರ ಹುಟ್ಟುಹಬ್ಬದ ಅಂಗವಾಗಿ ಪತ್ನಿ ಅಮೃತಾ ಅವರು ಭಾವನಾತ್ಮಕವಾಗಿ ಶುಭಾಶಯ ಕೋರಿದ್ದು, ಮಗನಿಂದಲೂ ಶುಭಾಶಯ ತಿಳಿಸಿದ್ದಾರೆ.

ಅಮೃತಾ ಅವರು ಜನವರಿ 25ರಂದು ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. 

ಫೆಬ್ರುವರಿ 1ರಂದು ಪ್ರಣಯ್‌ ಹುಟ್ಟುಹಬ್ಬವಿತ್ತು. ಆದ್ದರಿಂದ ಅಮೃತಾ, ಪತಿ ಪ್ರಣಯ್‌ಗೆ ಫೇಸ್‌ಬುಕ್‌ನಲ್ಲಿ ಶುಭಾಶಯ ಕೋರಿದ್ದಾರೆ. ಬಳಿಕ ಅವರು ತನ್ನ ಮಗುವನ್ನು ಎತ್ತಿಕೊಂಡಿರುವ ಫೋಟೊ ಹಾಕಿ ಮಗನಿಂದಲೂ ಶುಭಾಶಯ ತಿಳಿಸಿದ್ದಾರೆ.

ಇದೀಗ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಕಳೆದ ಸೆಪ್ಟೆಂಬರ್‌ನಲ್ಲಿ ತೆಲಂಗಾಣದ ಮಿರಿಯಾಲಗುಡದಲ್ಲಿ ದಲಿತ ಯುವಕ ಪಿ.ಪ್ರಣಯ್‌ ಅವರ ಮರ್ಯಾದೆ ಹತ್ಯೆ ನಡೆದ್ದಿತ್ತು. ಇದನ್ನೂ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

ಇವನ್ನೂ ಓದಿ...

ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ; ಪೊಲೀಸರ ವಶಕ್ಕೆ ಯುವತಿ ತಂದೆ

ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ: ಕೊಲೆಗೆ ₹1 ಕೋಟಿ ನೀಡಿದ್ದ ಯುವತಿ ತಂದೆ

ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ: ಏಳು ಮಂದಿ ಆರೋಪಿಗಳ ಬಂಧನ

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 8

  Sad
 • 1

  Frustrated
 • 2

  Angry

Comments:

0 comments

Write the first review for this !