ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮಗಳು 'ಹೀರೊ' ಮಾಡಿರುವ ಸಚಿವ ಸಾರಂಗಿ ಕ್ರಿಮಿನಲ್ ಪ್ರಕರಣಗಳ ಆರೋಪಿ!

Last Updated 1 ಜೂನ್ 2019, 5:09 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ಮತ್ತು ಸಚಿವರ ಪ್ರಮಾಣವಚನ ಸಮಾರಂಭದಲ್ಲಿಒಡಿಶಾದ ಸಂಸದ ಪ್ರತಾಪ್ ಚಂದ್ರ ಸಾರಂಗಿ ಹೆಸರು ಕೂಗಿ ಪ್ರಮಾಣ ವಚನಕ್ಕೆ ಕರೆದಾಗ ಸಭಿಕರ ಚಪ್ಪಾಳೆಯ ಸದ್ದು ಕಿವಿಗಡಕಿಚ್ಚುವಂತಿತ್ತು. ಕ್ಷಣ ಮಾತ್ರದಲ್ಲಿ ಪ್ರತಾಪ್ ಚಂದ್ರ ಸಾರಂಗಿ ಅವರ ಜೀವನ ಶೈಲಿಯ ಬಗ್ಗೆ ಬರಹಗಳು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿದವು. ಪ್ರಮುಖ ಮಾಧ್ಯಮಗಳೂ ಸುಮ್ಮನೆ ಕೂರಲಿಲ್ಲ.

ಒಡಿಶಾದ ಬಾಲಸೋರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಗೆದ್ದು ಸಂಸದರಾದ ಸಾರಂಗಿ ವಯಸ್ಸು 64.ಇವರೀಗಅತಿ ಸಣ್ಣ, ಸಣ್ಣಮತ್ತು ಮಧ್ಯಮ ಕೈಗಾರಿಕೆ ಮತ್ತು ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ ಸಚಿವಾಲಯದ ರಾಜ್ಯ ಸಚಿವರಾಗಿದ್ದಾರೆ.

ಹಿರಿಯ ಪತ್ರಕರ್ತರು ಸೇರಿದಂತೆ ಹಲವಾರು ಟ್ವಿಟರ್ ಬಳಕೆದಾರರು ಸಾರಂಗಿ ಅವರ ಕಟ್ಟುನಿಟ್ಟಿನ ಜೀವನ ಶೈಲಿ ಬಗ್ಗೆ ಹಾಡಿ ಹೊಗಳಿದ್ದಾರೆ.ವೈರಲ್ ಆಗಿರುವ ಟ್ವೀಟ್‌ವೊಂದರಲ್ಲಿ ಸಾರಂಗಿ ಅವರನ್ನು ಒಡಿಶಾದ ಮೋದಿ ಎಂದೇ ಕರೆಯಲಾಗುತ್ತಿದೆ ಎಂದು ಹೇಳಲಾಗಿದೆ. ಬಿಜೆಪಿ ಅಭ್ಯರ್ಥಿ ಸಾರಂಗಿ ಸೈಕಲ್ ಏರಿಚುನಾವಣೆ ಪ್ರಚಾರ ಮಾಡಿದ್ದರು. ಹೀಗೆಸಾಮಾಜಿಕ ಮಾಧ್ಯಮಗಳಲ್ಲಿಹೀರೊ ಆಗಿರುವ ಸಾರಂಗಿಯವರ ಮೇಲೆ ಹಲವಾರು ಗಂಭೀರ ಆರೋಪಗಳು ಇವೆ ಎಂದುದಿ ವೈರ್ ವರದಿ ಮಾಡಿದೆ.

ಸಾರಂಗಿ ಅವರು ನಾಮಪತ್ರ ಸಲ್ಲಿಸುವ ವೇಳೆ ನೀಡಿದ ಅಫಿಡವಿಟ್‌ನಲ್ಲಿ ಅವರ ಕೈಯಲ್ಲಿರುವ ನಗದು ₹15,000 ಎಂದಿದೆ.ಚರಾಸ್ತಿ ₹1.5 ಲಕ್ಷ ಮೌಲ್ಯದ್ದಾಗಿದ್ದು ಸ್ಥಿರಾಸ್ತಿ ಮೌಲ್ಯ ₹15 ಲಕ್ಷ.2019ರ ಲೋಕಸಭಾ ಅಭ್ಯರ್ಥಿಗಳಸರಾಸರಿ ಆಸ್ತಿ ₹4 ಕೋಟಿಯಷ್ಟಿದೆ.

ಏಳು ಕ್ರಿಮಿನಲ್ ಅಪರಾಧ ಪ್ರಕರಣಗಳು ಇವರ ಮೇಲಿದೆ ಎಂದು ಅಫಿಡವಿಟ್‌ನಲ್ಲಿದೆ. ಬೆದರಿಕೆಯೊಡ್ಡುವುದು, ದಂಗೆ, ಧರ್ಮ, ಜನಾಂಗಗಳ ಹೆಸರಿನಲ್ಲಿ ಗುಂಪುಗಳ ನಡುವೆ ಶತ್ರುತ್ವವನ್ನುಂಟು ಮಾಡಿದ್ದು, ಸುಲಿಗೆ ಮೊದಲಾದ ಆರೋಪ ಸಾರಂಗಿಮೇಲಿದೆ. ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಪ್ರಕರಣಗಳು ದಾಖಲಾಗಿದ್ದವು.

2002 ಮಾರ್ಚ್ ತಿಂಗಳಲ್ಲಿ ಸಾರಂಗಿ ಭಜರಂಗ ದಳದ ರಾಜ್ಯಾಧ್ಯಕ್ಷರಾದರು. ದಂಗೆ, ಕಿಚ್ಚಿಟ್ಟ ಪ್ರಕರಣ, ದಾಳಿ ಮತ್ತು ಸರ್ಕಾರದ ಆಸ್ತಿಗೆ ಹಾನಿಯುಂಟು ಮಾಡಿದಆರೋಪದಲ್ಲಿ ಒಡಿಶಾ ಪೊಲೀಸರು ಇವರನ್ನುಬಂಧಿಸಿದ್ದರು.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ದುರ್ಗಾ ವಾಹಿನಿ ಮತ್ತು ಬಜರಂಗ ದಳದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ 500 ಸಶಸ್ತ್ರಧಾರಿಪ್ರತಿಭಟನೆಕಾರರು ಒಡಿಶಾ ವಿಧಾನಸೌಧದ ಕಟ್ಟಡಕ್ಕೆ ಹಾನಿ ಮಾಡಿದ್ದರು. ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಆದೇಶ ನೀಡಬೇಕು ಎಂದುಒತ್ತಾಯಿಸಿ ಈ ಪ್ರತಿಭಟನೆ ನಡೆದಿತ್ತು.

1999ರಲ್ಲಿ ಸಾರಂಗಿ ಒಡಿಶಾದಲ್ಲಿ ಬಜರಂಗ ದಳದ ಮುಖ್ಯಸ್ಥರಾಗಿದ್ದಾಗ ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೈನ್ಸ್ ಮತ್ತು ಆತನ ಇಬ್ಬರು ಮಕ್ಕಳನ್ನು ಸಜೀವ ದಹನ ಮಾಡಲಾಗಿತ್ತು. ಸ್ಟೈನ್ಸ್ ಅವರ ಇಬ್ಬರ ಮಕ್ಕಳಲ್ಲಿಒಬ್ಬ ಮಗನ ವಯಸ್ಸು 11, ಇನ್ನೊಬ್ಬನದ್ದು -7. ಜನವರಿ ತಿಂಗಳಲ್ಲಿ ಸ್ಟೈನ್ ಮತ್ತು ಆತನ ಮಕ್ಕಳು ಕೆಂಜೊಹರ್‌‌ನ ಮನೋಹರ್‌ಪುರ್ ಗ್ರಾಮದಲ್ಲಿ ವಾಹನವೊಂದರಲ್ಲಿ ನಿದ್ರಿಸುತ್ತಿದ್ದಾಗ ಬಜರಂಗದಳದ ಸದಸ್ಯರು ವಾಹನಕ್ಕೆ ಬೆಂಕಿ ಹಚ್ಚಿ ಸ್ಟೈನ್ ಮತ್ತು ಇಬ್ಬರು ಮಕ್ಕಳನ್ನು ಸಜೀವ ದಹನ ಮಾಡಿದ್ದರು.

ಈ ಪ್ರಕರಣದ ಬಗ್ಗೆ ಸಾರಂಗಿ ಅವರನ್ನು ಪ್ರಶ್ನಿಸಿದಾಗ ಅವರು ತಾನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ ಇವರನ್ನು ಮತ್ತಷ್ಟು ಪ್ರಶ್ನಿಸದಿರಲು ನ್ಯಾಯವಾದಿ ನಿರ್ಧರಿಸಿದ್ದರು.

ಸಾರಂಗಿ ನೇತೃತ್ವದಲ್ಲಿ ಬಜರಂಗ ದಳ ಮತ್ತು ಆರ್‌ಎಸ್ಎಸ್ ಕ್ರೈಸ್ತ ಮಿಷನರಿಗಳ ವಿರುದ್ಧ ಸಿಡಿದೆದ್ದಿತ್ತು. ಮಿಷನರಿಗಳು ಅಲ್ಲಿನ ಬುಡಕಟ್ಟು ಜನಾಂಗವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಾರೆ ಎಂದು ಬಜರಂಗದಳ ಆರೋಪಿಸಿತ್ತು .

1999 ಫೆಬ್ರುವರಿಯಲ್ಲಿ ರೆಡಿಫ್‌ನಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಸ್ಟೈನ್ಸ್ ಮತ್ತು ಅವರ ಮಕ್ಕಳ ಹತ್ಯೆ ಪ್ರಕರಣದಲ್ಲಿ ತಾನು ಭಾಗಿಯಾಗಿಲ್ಲ ಎಂದು ಸಾರಂಗಿ ಹೇಳಿದ್ದರು.ಅದೇ ವೇಳೆ ಆಹತ್ಯೆಯನ್ನು ಅವರು ಖಂಡಿಸಿದ್ದಾರೆ.

ಒಡಿಶಾದಲ್ಲಿ ಕ್ರೈಸ್ತ ಸಮುದಾಯದ ಜನರ ಜನಸಂಖ್ಯೆ ಏರಿಕೆಯಾಗುತ್ತಿರುವ ಬಗ್ಗೆಯೂ ಸಾರಂಗಿಇಲ್ಲಿ ಉಲ್ಲೇಖಿಸಿದ್ದು ಕ್ರೈಸ್ತ ಮಿಷನರಿಗಳು ಬಲವಂತವಾಗಿ ಮತಾಂತರ ಮಾಡುತ್ತಿವೆ ಎಂದು ಆರೋಪಿಸಿದ್ದರು.

ಅಂದಹಾಗೆ ಒಡಿಶಾದಲ್ಲಿನ ಕ್ರೈಸ್ತ ಮಿಷನರಿಗಳ ಕೆಲಸವನ್ನು ನೀವು ಹೇಗೆ ನೋಡುತ್ತಿದ್ದೀರಿ ಎಂದು ಕೇಳಿದಾಗ ಕೆಲವು ವಿಚಾರಗಳನ್ನು ಹೊರತು ಪಡಿಸಿ ಕ್ರೈಸ್ತ ಮಿಷನರಿಗಳ ಬಗ್ಗೆ ಹೇಳುವುದಾದರೆ ಅವರು ಮೂರ್ಖರು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT