ಸೈಪ್ರಸ್‌ಗೆ ಬಂದಿಳಿದ ರಾಮನಾಥ ಕೋವಿಂದ್‌

7

ಸೈಪ್ರಸ್‌ಗೆ ಬಂದಿಳಿದ ರಾಮನಾಥ ಕೋವಿಂದ್‌

Published:
Updated:
Deccan Herald

ಲರ್‌ನಾಕಾ, ಸೈಪ್ರಸ್‌: ಯುರೋಪ್‌ನ ಮೂರು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಭಾನುವಾರ ಸೈಪ್ರಸ್‌ನ ಲರ್‌ನಾಕಾ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದರು. ಸೈಪ್ರಸ್‌ನ ಇಂಧನ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವ ಜಾರ್ಜಿಯೊಸ್‌ ಲಕ್ಕೊಟೈಪ್ರಿಸ್‌ ಅವರು ಕೋವಿಂದ್‌ ದಂಪತಿಯನ್ನು ಬರಮಾಡಿಕೊಂಡರು.

‘ಸೈಪ್ರಸ್‌ನಿಂದ ಪ್ರವಾಸ ಆರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಎರಡು ರಾಷ್ಟ್ರಗಳು ಅತ್ಯಂತ ಸುಮಧುರ ಹಾಗೂ ಅಚಲ ಬಾಂಧವ್ಯ ಹೊಂದಿದೆ. ನನ್ನ ಪ್ರವಾಸ ಕೂಡ ಫಲಪ್ರದವಾಗಿ ಮುಂದುವರಿಯಲಿದೆ’ ಎಂದು ರಾಮನಾಥ ಕೋವಿಂದ್‌ ಅವರ ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಸೈಪ್ರಸ್‌ ನಂತರ, ಬಲ್ಗೇರಿಯಾ, ಜೆಕ್‌ ರಿಪಬ್ಲಿಕ್‌ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ. ರಾಮನಾಥ ಕೋವಿಂದ್‌ ಅವರು ರಾಷ್ಟ್ರಪತಿಯಾಗಿ ಎರಡನೇ ವರ್ಷಕ್ಕೆ ಕಾಲಿಟ್ಟ ಬಳಿಕ ಕೈಗೊಂಡ ಮೊದಲ ವಿದೇಶ ಪ್ರವಾಸ ಇದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !