ಭಾನುವಾರ, 14 ಡಿಸೆಂಬರ್ 2025
×
ADVERTISEMENT
ADVERTISEMENT

ಅಲ್ಟ್ರಾ ಟ್ರೇಲ್ ರನ್‌: ದುರ್ಗಮ ಹಾದಿಯ ಓಟದ ಸಂಭ್ರಮ

Published : 13 ಡಿಸೆಂಬರ್ 2025, 22:30 IST
Last Updated : 13 ಡಿಸೆಂಬರ್ 2025, 22:30 IST
ಫಾಲೋ ಮಾಡಿ
Comments
ಮ್ಯಾರಥಾನ್ ಓಟವನ್ನೂ ಮೀರಿದ ಅಲ್ಟ್ರಾ ರನ್‌ ಈಗ ಭಾರತದಲ್ಲಿ ಪ್ರವರ್ಧಮಾನದಲ್ಲಿದೆ. ಅಲ್ಟ್ರಾ ರನ್‌ನಲ್ಲೇ ಅತ್ಯಂತ ದುರ್ಗಮವಾದ ಹಾಗೂ ಸವಾಲಿನ ಅಲ್ಟ್ರಾ ಟ್ರೇಲ್ ರನ್‌ ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ಒರೆಗೆ ಹಚ್ಚುತ್ತದೆ. ಇದರಲ್ಲಿ ಯಶಸ್ಸು ಕಂಡವರು ಉದ್ಯೋಗ ಮತ್ತು ವೈಯಕ್ತಿಕ ಜೀವನವನ್ನು ಸುಲಲಿತವಾಗಿ ಸಾಗಿಸುತ್ತಿರುವುದು ಓಟಗಾರರ ಅನುಭವದ ಮಾತಿನಿಂದ ತಿಳಿಯುತ್ತದೆ. ಈ ಕಾರಣದಿಂದ ಕಾರ್ಪೊರೇಟ್ ವಲಯದಲ್ಲಿ ಈಗ ಅಲ್ಟ್ರಾ ಓಟಗಳು ಆದ್ಯತೆ ಪಡೆದುಕೊಂಡಿವೆ.
ಗುಡ್ಡದ ಮೇಲೆ ಬಿರುಬಿಸಿಲಿನಲ್ಲಿ ಓಟ
ಗುಡ್ಡದ ಮೇಲೆ ಬಿರುಬಿಸಿಲಿನಲ್ಲಿ ಓಟ
ಕಾರ್ಪೊರೇಟ್ ವಲಯದ ಆದ್ಯತೆ
ದೀರ್ಘ ದೂರ ಓಟ ದೇಹ ಮತ್ತು ಮನಸ್ಸಿಗೆ ವ್ಯಾಯಾಮ ಒದಗಿಸುವುದರೊಂದಿಗೆ ಜೀವನಶೈಲಿಯಲ್ಲಿ ಉತ್ತಮ ಹವ್ಯಾಸಗಳನ್ನು ಸೇರಿಸಲು ನೆರವಾಗುತ್ತದೆ ಮತ್ತು ಶಿಸ್ತು ಮೂಡಿಸುತ್ತದೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ. ಮಾನಸಿಕ ತುಮುಲ ಕೆಲಸದ ಒತ್ತಡ ನಿಯಂತ್ರಣ ಮತ್ತು ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೂ ನೆರವಾಗುತ್ತದೆ. ಹೀಗಾಗಿ ಕಾರ್ಪೊರೇಟ್ ವಲಯ ಈಗ ಓಟಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT