ಧರ್ಮಶಾಲಾ: ಶುಭಮನ್ ಗಿಲ್ ಅವರಿಗೆ ಟಿ20 ಕ್ರಿಕೆಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡುವ ಕಾಲ ಈಗ ಬಂದಿದೆ. ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ಲಯಕ್ಕೆ ಮರಳುವ ಸವಾಲು ಗಿಲ್ ಅವರ ಮುಂದಿದೆ.

ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಗಿಲ್ ವಿಫಲರಾಗಿದ್ದರು. ಅಭಿಷೇಕ್ ಶರ್ಮಾ ಜೊತೆಗೆ ಅವರು ಈ ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದರು. ಒಂದೊಮ್ಮೆ ಗಿಲ್ ಲಯಕ್ಕೆ ಮರಳದೇ ಹೋದರೆ 11 ಬಳಗದಲ್ಲಿ ಸ್ಥಾನ ತಪ್ಪಲಿರುವುದು ಬಹುತೇಕ ಖಚಿತ.

ಭಾನುವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯವು ಗಿಲ್ ಅವರಿಗೆ ಮೊದಲ ಪರೀಕ್ಷೆಯಾಗಲಿದೆ. ಏಕೆಂದರೆ ಭಾರತ ತಂಡಕ್ಕೆ ಸರಣಿ ಜಯ ಸಾಧಿಸಬೇಕಾದರೆ, ಇನ್ನುಳಿದಿರುವ ಮೂರರಲ್ಲಿ ಎರಡು ಪಂದ್ಯಗಳನ್ನಾದರೂ ಗೆಲ್ಲಬೇಕಿದೆ.

ಹಿಮಾಲಯದ ಮಡಿಲಲ್ಲಿರುವ ಧರ್ಮಶಾಲಾದಲ್ಲಿ ಈಗ 10 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಚಳಿಯ ವಾತಾವರಣದಲ್ಲಿ ಗಿಲ್ ಅವರಲ್ಲದೇ ನಾಯಕ ಸೂರ್ಯಕುಮಾರ್ ಯಾದವ್ ಅವರು ಕೂಡ ಮೈಕೊಡವಿ ಏಳಬೇಕಾದ ಅಗತ್ಯವಿದೆ. ಗಿಲ್ ಅವರಿಗೆ ಸ್ಥಾನ ಕೊಡುವುದಕ್ಕಾಗಿ ಸಂಜು ಸ್ಯಾಮ್ಸನ್ ಅವರನ್ನು ಕಣಕ್ಕೆ ಇಳಿಸಿಲ್ಲ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಟೀಕೆ ಮಾಡಲಾಗುತ್ತಿದೆ. ಟಿ20 ಕ್ರಿಕೆಟ್ನಲ್ಲಿ ಗಿಲ್ ಅವರು ಆರಂಭಿಕ ಆಟಗಾರನಾಗಿ ಆಡಲು ಸರಿಹೊಂದುವುದಿಲ್ಲ ಎಂಬುದು ಗೊತ್ತಿದ್ದರೂ ಅವರನ್ನೇ ಕಣಕ್ಕಿಳಿಸುತ್ತಿರುವುದು ಹಲವು ಪ್ರಶ್ನೆಗಳನ್ನು ಮೂಡಿಸಿರುವುದು ಸುಳ್ಳಲ್ಲ. ಟಿ20 ಮಾದರಿಯಲ್ಲಿ 165ರ ಸ್ಟ್ರೈಕ್ ರೇಟ್ ಹೊಂದಿರುವ ಯಶಸ್ವಿ ಜೈಸ್ವಾಲ್ ಅವರಿಗೂ ಅವಕಾಶ ದೊರೆಯುತ್ತಿಲ್ಲ.

ಎರಡನೇ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಹಾಗೂ ಶಿವಂ ದುಬೆ ಅವರನ್ನು ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳಿಸಿದ್ದು ಕೋಚ್ ಗಂಭೀರ್ ಅವರ ಅಸ್ಪಷ್ಟ ಮನಸ್ಥಿತಿಯನ್ನು ಬಿಂಬಿಸುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್ಪಿಸಿಎ) ಕ್ರೀಡಾಂಗಣದ ಪಿಚ್ನಲ್ಲಿ ಚೆಂಡು ಹೆಚ್ಚು ಪುಟಿಯುತ್ತದೆ. ಚೆಂಡು ಕೂಡ ವೇಗವಾಗಿ ಚಲಿಸುವುದರಿಂದ ಬ್ಯಾಟರ್ಗಳಿಗೆ ಸವಾಲಾಗಲಿದೆ.

ದಕ್ಷಿಣ ಆಫ್ರಿಕಾದ ವೇಗದ ಬೌಲರ್ಗಳಾದ ಎನ್ರಿಚ್ ನಾಕಿಯಾ, ಮಾರ್ಕೊ ಯಾನ್ಸೆನ್, ಲುಂಗಿ ಎನ್ಗಿಡಿ, ಒಟ್ನೀಲ್ ಬಾರ್ತ್ಮನ್ ಮತ್ತು ಲುಥೋ ಸಿಪಾಮ್ಲಾ ಅವರಿಗೆ ಭಾರತದ ಪಿಚ್ಗಳಲ್ಲಿ ಬೌಲಿಂಗ್ ಮಾಡುವ ಮರ್ಮ ತಿಳಿದಿದೆ. ಕಳೆದ ಪಂದ್ಯಗಳಲ್ಲಿ ಅವರು ಸಾಮರ್ಥ್ಯವನ್ನೂ ಮೆರೆದಿದ್ದಾರೆ. ಆದರೆ, ಭಾರತದ ಬೌಲಿಂಗ್ ಪಡೆಯಲ್ಲಿ ಎಲ್ಲವೂ ಸರಿಯಿಲ್ಲ. ಕಳೆದ ಪಂದ್ಯದಲ್ಲಿ ಅರ್ಷದೀಪ್ ಅವರ ‘13 ಎಸೆತಗಳ ಓವರ್’ ಈಗ ಚರ್ಚೆಗೆ ಗ್ರಾಸವಾಗಿದೆ. ಅವರು ತಮ್ಮ ಲೈನ್ ಮತ್ತು ಲೆಂತ್ ಸರಿಪಡಿಸಿಕೊಳ್ಳದಿದ್ದರೆ ಜಸ್ಪ್ರೀತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಮೇಲೆ ಒತ್ತಡ ಹೆಚ್ಚುತ್ತದೆ.

ಕ್ವಿಂಟನ್ ಡಿಕಾಕ್, ಏಡನ್ ಮರ್ಕರಂ, ರೀಜಾ ಹೆನ್ರಿಕ್ಸ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್ ಅವರನ್ನು ನಿಯಂತ್ರಿಸುವುದು ಆತಿಥೇಯ ಬೌಲರ್ಗಳ ಮುಂದಿರುವ ಪ್ರಮುಖ ಸವಾಲು.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಜಿಯೊಹಾಟ್ಸ್ಟಾರ್ ಆ್ಯಪ್, ಸ್ಟಾರ್ ಸ್ಪೋರ್ಟ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.