ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಜಾರಿಯಿಂದ ಗಾಂಧೀಜಿ ಕನಸು ನನಸು: ರಾಷ್ಟ್ರಪತಿ ಕೋವಿಂದ್

Last Updated 31 ಜನವರಿ 2020, 6:44 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಎರಡೂ ಸದನಗಳು ಪೌರತ್ವ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ನೀಡುವ ಮೂಲಕ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ ಆಶಯಗಳನ್ನು ಈಡೇರಿಸಿದಂತಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು.

ಜಾಗತಿಕ ಆರ್ಥಿಕ ಸ್ಥಿತಿಗತಿ ಹಾಗೂ ದೇಶದ ಆರ್ಥಿಕತೆ ಕುರಿತು ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿರುವ 2020-21 ಸಾಲಿನ ಕೇಂದ್ರ ಬಜೆಟ್ ಅಧಿವೇಶನಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ರಾಷ್ಟ್ರಪತಿ ಕೋವಿಂದ್ ಅವರು ತಮ್ಮ ಬಜೆಟ್-ಪೂರ್ವ ಭಾಷಣದಲ್ಲಿ ಪೌರತ್ವ ಕಾಯ್ದೆಯ ತಿದ್ದುಪಡಿಯನ್ನು ಐತಿಹಾಸಿಕ ಎಂದು ಬಣ್ಣಿಸಿದಾಗ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳು ಬಲವಾಗಿ ವಿರೋಧಿಸಿದವು.

ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಸಂಸದರೂ ಈ ಅಧಿವೇಶನದಲ್ಲಿ ಹಾಜರಿರುವುದು ನಮ್ಮ ಸಂವಿಧಾನದ ಆಶಯ. ದೇಶದ ಹಿತಕ್ಕೆ ಕಾರಣವಾಗುವ ಕಾನೂನು ರೂಪಿಸುವ ನಿಟ್ಟಿನಲ್ಲಿ ದೇಶವಾಸಿಗಳ ಆಕಾಂಕ್ಷೆಗಳನ್ನು, ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಸಹಕರಿಸಬೇಕು ಎಂದು ರಾಷ್ಟ್ರಪತಿ ಹೇಳಿದರು.

ಪರಸ್ಪರ ಮಾತುಕತೆ-ಚರ್ಚೆಗಳು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಗೊಳಿಸುತ್ತವೆ ಎಂಬುದು ನಮ್ಮ ಸರ್ಕಾರದ ದೃಢವಾದ ನಂಬಿಕೆಯಾಗಿದೆ. ಇದೇ ವೇಳೆ, ಪ್ರತಿಭಟನೆಯ ಹೆಸರಿನಲ್ಲಿ ನಡೆಯುವ ಯಾವುದೇ ಹಿಂಸಾಚಾರಗಳೂ ಸಮಾಜವನ್ನು ಮತ್ತು ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ನುಡಿದರು.

ಇತರ ದೇಶಗಳ ನಾಗರಿಕರಿಗೆ ಭಾರತೀಯ ಪೌರತ್ವ ನೀಡಲು ಈ ಹಿಂದೆ ಇದ್ದ ಯಾವುದೇ ಕಾನೂನನ್ನು ನಾವು ಬದಲಿಸಿಲ್ಲ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಎಲ್ಲರಿಗೂ ಪೌರತ್ವ ನೀಡಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಕೋವಿಂದ್ ತಿಳಿಸಿದರು.

ನಾಳೆ (ಶನಿವಾರ) ಬಜೆಟ್ ಮಂಡನೆಯಾಗಲಿದ್ದು, ಕ್ಷಣ ಕ್ಷಣದ ತಾಜಾ ಮಾಹಿತಿಗಾಗಿ ಬಜೆಟ್ ವಿಶೇಷ ಪುಟವನ್ನು ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT