ಬುಧವಾರ, ಏಪ್ರಿಲ್ 1, 2020
19 °C

ಕೊರೊನಾ ರೋಗಾಣು ಪರೀಕ್ಷೆ ಪರವಾನಗಿ ಖಾಸಗಿ ಲ್ಯಾಬ್‌‌ಗೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಸ್ವಿಜರ್ಲೆಂಡ್ ಮೂಲದ 'ರೊಶೆ ಡಯಾಗ್ನಟಿಕ್ಸ್ ಇಂಡಿಯಾ ಸಂಸ್ಥೆ' ಕೊರೊನಾ ರೋಗಾಣು ಪತ್ತೆ ಮಾಡಲು ಕೇಂದ್ರಸರ್ಕಾರದಿಂದ ಅಧಿಕೃತವಾಗಿ ಪರವಾನಗಿ ಪಡೆದಿದೆ.

ಇದರಿಂದಾಗಿ ಈ ಸಂಸ್ಥೆ ಕೊರೊನಾ ರೋಗಾಣು ಪತ್ತೆ ಮಾಡಲು ಪರವಾನಗಿ ಪಡೆದ ಪ್ರಥಮ ಖಾಸಗಿ ಲ್ಯಾಬ್ ಆಗಿದೆ. ಈ ಸಂಸ್ಥೆಯು ಸ್ವಿಜರ್ಲೆಂಡ್ ನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಈ ಲ್ಯಾಬ್ ವಿದೇಶದಲ್ಲಿ ಅತಿ ಬೇಗ ಕೊರೊನಾ ಸೋಂಕು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಈ ಸಂಸ್ಥೆಗೆ ಕೊರೊನಾ ಸೋಂಕು ಪತ್ತೆ ಹಚ್ಚುವ ಪರವಾನಗಿ ನೀಡಿರುವುದಾಗಿ ಎಎನ್‌‌ಐ ಸಂಸ್ಥೆ ತಿಳಿಸಿದೆ. 

ಈ ಸಂಸ್ಥೆ ವಿದೇಶದಲ್ಲಿ ಕಡಿಮೆ ಅವಧಿಯಲ್ಲಿ ಕೊರೊನಾ ಸೋಂಕು ಪತ್ತೆ ಮಾಡುವ ಲ್ಯಾಬ್‌ಗಳಲ್ಲಿ ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಕೊವಿಡ್-19 ರಕ್ತ ಪರೀಕ್ಷೆ ನಡೆಸಲು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಲ್ಯಾಬೊರೇಟರಿ ಅಗತ್ಯವಿದೆ. ಭಾರತದಲ್ಲಿ ಇಂತಹ ಲ್ಯಾಬ್‌‌ಗಳು ಇರುವುದು ಕಡಿಮೆ.

ಭಾರತೀಯ ಔಷಧ ಸಂಶೋಧನಾಲಯ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ನಿಯಮಗಳಿಗೆ ಅನುಗುಣವಾಗಿ ಲ್ಯಾಬೊರೇಟರಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಭಾರತದಲ್ಲಿ ಇಂತಹ 72 ಅತ್ಯಾಧುನಿಕ ಲ್ಯಾಬೊರೇಟರಿಗಳಿದ್ದು, ಬರುವ ವಾರದಲ್ಲಿ 49 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಕೇಂದ್ರ ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಈ ಸಂಬಂಧ ಮಾತನಾಡಿದ ಕೇಂದ್ರ ಆರೋಗ್ಯ ಸಂಶೋಧನಾಲಯದ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ್ , ಎನ್ ಎಬಿಎಲ್ ಸಂಸ್ಥೆಯಿಂದ ಮಾನ್ಯತೆ ಪಡೆದ ಲ್ಯಾಬ್ ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಭವಿಷ್ಯದಲ್ಲಿ ಉತ್ತಮ ಫಲಿತಾಂಶ ನೀಡಲಿದೆ ಎಂದಿದ್ದಾರೆ.

ಪ್ರಸ್ತುತ 147 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, ಮೂರು ಸಾವು ಸಂಭವಿಸಿದೆ. ವಿಶ್ವದಾದ್ಯಂತ 167,511 ಸೋಂಕು ಪ್ರಕರಣ ಪತ್ತೆಯಾಗಿದ್ದು, ವಿಶ್ವದ 152 ದೇಶಗಳಲ್ಲಿ 6,606 ಮಂದಿ ಸಾವನ್ನಪ್ಪಿದ್ದಾರೆ ಎಂದು ಎಎನ್ ಐ ಸಂಸ್ಥೆ ವರದಿ ಮಾಡಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು