ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಆಡಳಿತ ಸಂಬಳ ನೀಡದ ಕಾರಣ ಪ್ರೊಫೆಸರ್ ಆತ್ಮಹತ್ಯೆ

Last Updated 12 ಫೆಬ್ರುವರಿ 2020, 6:18 IST
ಅಕ್ಷರ ಗಾತ್ರ

ಉಮರಿಯ(ಮಧ್ಯಪ್ರದೇಶ): ಇಲ್ಲಿನ ಕಾಲೇಜೊಂದರಆಡಳಿತ ಮಂಡಳಿ ಒಂಬತ್ತು ತಿಂಗಳಿಂದ ಸಂಬಳ ನೀಡದಕಾರಣಪ್ರಾಧ್ಯಾಪಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಪ್ರಾಧ್ಯಾಪಕ ಸಂಜಯಕುಮಾರ್ ಮೃತಪಟ್ಟವರು. ಇವರು ಪತ್ನಿ ತವರು ಮನೆಗೆ ಹೋಗಿದ್ದ ಸಮಯದಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಭೇಟಿ ನೀಡಿದೆವು. ಆ ಸಮಯದಲ್ಲಿ ಸಂಜಯ್ ದೇಹ ಫ್ಯಾನಿಗೆ ನೇಣುಹಾಕಿದ ಸ್ಥಿತಿಯಲ್ಲಿತ್ತು ಎಂದು ಚಂಡಿಯಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಎಂ.ಐ.ವರ್ಮಾ ವರದಿಗಾರರಿಗೆ ತಿಳಿಸಿದ್ದಾರೆ. ಸ್ಥಳದಲ್ಲಿ ಪತ್ರವೊಂದು ದೊರೆತಿದ್ದು ಅದರಲ್ಲಿ ಪಿಎಫ್ ಮತ್ತು ಸಂಬಳದ ಹಣವನ್ನು ನನ್ನ ಪತ್ನಿಗೆ ಕೊಡಿ ಎಂದು ಬರೆದಿದೆ.

ನನ್ನ ಮನೆಯ ಹೇಗೆ ನಡೆಸುತ್ತಿದ್ದೇವೆ ಎಂದು ನಮಗೆ ಮಾತ್ರ ಗೊತ್ತು. ಪತಿಗೆ 8-9ತಿಂಗಳಿಂದ ಸಂಬಳ ಕೊಡುತ್ತಿರಲಿಲ್ಲ. ನಮ್ಮ ಮಕ್ಕಳಿಗೆ ಓದಲಿಸಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅವರು ಯಾವಾಗಲೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ನಾನು ಪರಿಸ್ಥಿತಿಯನ್ನು ಅರ್ಥಮಾಡಿ ಸಮಾಧಾನ ಹೇಳುತ್ತಿದ್ದೆ. ಆದರೂ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು. ನಾನು ಮನೆಯಲ್ಲಿ ಇಲ್ಲದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಜಯ್ ಪತ್ನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT