ಶನಿವಾರ, ಏಪ್ರಿಲ್ 10, 2021
30 °C

ಪಂಜಾಬ್‌: ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡಿಗಡ: ಲೋಕಸಭೆ ಚುನಾವಣೆಯ ಸೋಲು ಮತ್ತು ಪಕ್ಷದೊಳಗಿನ ಭಿನ್ನಮತದಿಂದ ನಲುಗಿರುವ ಕಾಂಗ್ರೆಸ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿರುವ ನವಜೋತ್‌ ಸಿಂಗ್ ಸಿಧು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಈ ವಿಷಯ ಪ್ರಕಟಿಸಿದ್ದಾರೆ. 

ಜೂನ್‌ 10ರ ದಿನಾಂಕ ಇರುವ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸಲ್ಲಿಸಲಾಗಿದ್ದ ರಾಜೀನಾಮೆಯನ್ನು ಈಗ ಸಿಧು ಬಹಿರಂಗಪಡಿಸಿದ್ದಾರೆ. 

ಮುಖ್ಯಮಂತ್ರಿ ಅಮರಿಂದರ್‌ ಸಿಂಗ್ ಅವರೊಂದಿಗೆ ಸಿಧು ತೀವ್ರ ಭಿನ್ನಮತ ಹೊಂದಿದ್ದಾರೆ. ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ವ್ಯವಹಾರಗಳ ಖಾತೆಯನ್ನು ಅವರು ಹೊಂದಿದ್ದರು. ಆದರೆ, ಭಿನ್ನಮತ ತೀವ್ರಗೊಂಡ ಬಳಿಕ ಈ ಖಾತೆಗಳನ್ನು ಅವರಿಂದ ಅಮರಿಂದರ್‌ ವಾಪಸ್‌ ಪಡೆದುಕೊಂಡಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು