ಮೋದಿ 'ಪ್ರೈಮ್ ಟೈಮ್ ಮಿನಿಸ್ಟರ್': ರಾಹುಲ್ ಗಾಂಧಿ

ಬುಧವಾರ, ಮೇ 22, 2019
24 °C

ಮೋದಿ 'ಪ್ರೈಮ್ ಟೈಮ್ ಮಿನಿಸ್ಟರ್': ರಾಹುಲ್ ಗಾಂಧಿ

Published:
Updated:

ನವದೆಹಲಿ: ಫೆ. 14ರಂದು ಜಮ್ಮು ಕಾಶ್ಮೀರದ ಪುಲ್ವಾಮ ದಾಳಿ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಜಾಹೀರಾತು ಚಿತ್ರವೊಂದರ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು. ಅವರು ಪ್ರೈಮ್ ಟೈಮ್ ಮಿನಿಸ್ಟರ್. ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿ ದೇಶದ ಜನರು ದುಃಖಿಸುತ್ತಿದ್ದರೆ ಪ್ರಧಾನಿ ಮೋದಿ ಕ್ಯಾಮೆರಾ ಮುಂದೆ ನಗುತ್ತಾ ನಿಂತಿದ್ದರು ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪುಲ್ವಾಮ ಉಗ್ರದಾಳಿಯಲ್ಲಿ 40  ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದ ಮೂರು ಗಂಟೆ ನಂತರವೂ ಪ್ರೆಮ್ ಟೈಮ್ ಮಿನಿಸ್ಟರ್ ಶೂಟಿಂಗ್ ಮುಂದುವರಿಸಿದ್ದರು. ಹುತಾತ್ಮರ ಕುಟುಂಬದವರ ದುಃಖದಲ್ಲಿ ದೇಶ ಭಾಗಿಯಾಗಿದ್ದರೆ,  ಪ್ರಧಾನಿ ನಗುತ್ತಾ ಫೋಟೊಶೂಟ್ ಮಾಡುತ್ತಿದ್ದರು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ನಲ್ಲಿ ರಾಹುಲ್  PhotoShootSarkar ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. 
 

ಇದನ್ನೂ ಓದಿ: ಪುಲ್ವಾಮ ದಾಳಿ ಬಗ್ಗೆ ಮಾಹಿತಿ ಸಿಗುವವರೆಗೂ ಮೋದಿ ಆಹಾರ, ನೀರು ಸೇವಿಸಿರಲಿಲ್ಲ

ರಾಹುಲ್ ಟ್ವೀಟ್‍ಗೆ ಬಿಜೆಪಿ ಪ್ರತಿಕ್ರಿಯೆ

ಮೋದಿ ವಿರುದ್ಧ ರಾಹುಲ್ ಟ್ವೀಟ್ ಮಾಡಿದ ಬೆನ್ನಲ್ಲೇ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ರಾಹುಲ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪುಲ್ವಾಮ ದಾಳಿ ನಡೆದಾಗ ಪ್ರಧಾನಿ ಡಿಸ್ಕವರಿ ಚಾನೆಲ್‍ನ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು ಎಂಬ ಪ್ರಚಾರ ನಡೆಯುತ್ತಿದೆ, ಆದರೆ ಮೋದಿ ಪ್ರತಿಕ್ಷಣದ ಅಪ್‌ಡೇಟ್‍ಗಳನ್ನು ಪಡೆಯುತ್ತಿದ್ದರು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು ಎಂದು ಮೀನಾಕ್ಷಿ ಹೇಳಿದ್ದಾರೆ.

ಮುಂಬೈನಲ್ಲಿ ಭಯೋತ್ಪಾದನಾ ದಾಳಿ ನಡೆದಾಗ ರಾಹುಲ್ ಏನು ಮಾಡಿದ್ದರು ಎಂಬುದಕ್ಕೆ ಇಲ್ಲಿದೆ ಸಾಕ್ಷ್ಯ ಎಂದು ಲೇಖಿ, ಪತ್ರಿಕಾ ವರದಿಯೊಂದನ್ನು ಟ್ವೀಟಿಸಿದ್ದಾರೆ.

ಏತನ್ಮಧ್ಯೆ, ರಾಹುಲ್  ಮೋದಿ ಬಗ್ಗೆ ಹೇಳುತ್ತಿರುವುದು ಸುಳ್ಳು. ಮೋದಿಯವರ ಈ ಫೋಟೊ ಬೆಳಗ್ಗೆ ಕ್ಲಿಕ್ಕಿಸಿದ್ದು ಎಂದು ಬಿಜೆಪಿ ಮೂಲಗಳು ಹೇಳಿವೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !