ಸೋಮವಾರ, ಸೆಪ್ಟೆಂಬರ್ 27, 2021
21 °C

ಹೆಲಿಕಾಪ್ಟರ್‌ ರಿಪೇರಿಗೆ ಸ್ವತಃ ಕೈ ಜೋಡಿಸಿದ ರಾಹುಲ್‌: ವಿಡಿಯೊ ವೈರಲ್‌

ಏಜನ್ಸಿಸ್ Updated:

ಅಕ್ಷರ ಗಾತ್ರ : | |

ಉನಾ: ಪಕ್ಷದ ಸಮಾರಂಭವೊಂದರಲ್ಲಿ ಭಾಗವಹಿಸಲು ಶುಕ್ರವಾರ ಹಿಮಾಚಲ ಪ್ರದೇಶಕ್ಕೆ ತೆರಳುವ ವೇಳೆ ಉನಾದಲ್ಲಿ ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ನಲ್ಲಿ ಸಣ್ಣದೊಂದು ಸಮಸ್ಯೆ ಕಾಣಿಸಿಕೊಂಡಿದ್ದು, ಸ್ವತಃ ರಾಹುಲ್‌ ಅವರೂ ರಿಪೇರಿಗೆ ಕೈಜೋಡಿಸಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. 

ಉನಾದಲ್ಲಿ ಶುಕ್ರವಾರ ನಡೆದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ, ಹಿಮಾಚಲ ಪ್ರದೇಶದಲ್ಲಿ ಆಯೋಜಿಸಿದ್ದ ಮತ್ತೊಂದು ಸಮಾವೇಶಕ್ಕೆ ತೆರಳಲೆಂದು ಕಾಪ್ಟರ್‌ ಏರಿದ್ದರು. ಈ ವೇಳೆ ಕಾಪ್ಟರ್‌ನಲ್ಲಿ ಸಣ್ಣದೊಂದು ಸಮಸ್ಯೆ ಕಾಣಿಸಿಕೊಂಡಿತ್ತು. ಆಗ ಕಾಪ್ಟರ್‌ನ ಸಿಬ್ಬಂದಿ ಅದನ್ನು ಸರಿಪಡಿಸಲು ನಿಂತರು. ಈ ವೇಳೆ ಕಾಪ್ಟರ್‌ನಿಂದ ಹೊರ ಬಂದ ರಾಹುಲ್‌ ಗಾಂಧಿ ಅವರು ಕಾಪ್ಟರ್‌ ಸಿಬ್ಬಂದಿಯೊಂದಿಗೆ ರಿಪೇರಿಗೆ ಕೈ ಜೋಡಿಸಿದರು. 

ಘಟನೆಯ ಚಿತ್ರವನ್ನು ಸಾಮಾಜಿಕ ತಾಣ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ರಾಹುಲ್‌ ಗಾಂಧಿ, ಒಗ್ಗಟ್ಟಿನ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಸಣ್ಣ ಸಮಸ್ಯೆಯನ್ನು ಹೊರತುಪಡಿಸಿ ಹೆಲಿಕಾಪ್ಟರ್‌ ಸುರಕ್ಷಿತವಾಗಿರುವುದಾಗಿಯೂ ಅವರು ಬರೆದುಕೊಂಡಿದ್ದಾರೆ. 

ಈ ಚಿತ್ರ ಸಾಮಾಜಿಕ ತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಲಕ್ಷಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು