ಭಾನುವಾರ, ಜನವರಿ 17, 2021
27 °C

ರಾಹುಲ್‌ ನಾಪತ್ತೆ ಅಭ್ಯರ್ಥಿ: ಸ್ಮೃತಿ ಇರಾನಿ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಮೇಠಿ: ‘ನಾಪತ್ತೆಯಾಗಿದ್ದ ಸಂಸದ’ರಾಗಿದ್ದ ರಾಹುಲ್‌ ಗಾಂಧಿ ಅವರು ಈಗ ‘ನಾಪತ್ತೆಯಾದ ಅಭ್ಯರ್ಥಿ’ಯೂ ಆಗಿದ್ದಾರೆ ಎಂದು ಅಮೇಠಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ರಾಹುಲ್‌ ಗಾಂಧಿ ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ.

ಕಾಂಗ್ರೆಸ್‌ ಪಕ್ಷದ ಸ್ಥಿತಿ ಇಲ್ಲಿ ಎಷ್ಟು ಶೋಚನೀಯವಾಗಿದೆ ಎಂದರೆ, ಗಾಂಧಿ ಕುಟುಂಬದ ಭದ್ರಕೋಟೆಯಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆತರಬೇಕಾಗಿದೆ ಎಂದು ಸ್ಮೃತಿ ಹಂಗಿಸಿದ್ದಾರೆ. 

‘ಅಮೇಠಿಗಾಗಿ ರಾಹುಲ್‌ ಕೆಲಸ ಮಾಡಿದ್ದಿದ್ದರೆ ಕಾಂಗ್ರೆಸ್‌ ಈ ಸ್ಥಿತಿಗೆ ಬರುತ್ತಿರಲಿಲ್ಲ. ಕಾರ್ಯಕರ್ತರು ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ. ಈವರೆಗೆ ರಾಹುಲ್‌ ಅವರನ್ನು ನಾಪತ್ತೆಯಾದ ಸಂಸದ ಎಂದಷ್ಟೇ ಹೇಳಲಾಗುತ್ತಿತ್ತು. ಈಗ ಅವರು ಅಭ್ಯರ್ಥಿಯಾಗಿಯೂ ನಾಪತ್ತೆಯಾಗಿದ್ದಾರೆ’ ಎಂದು ಸ್ಮೃತಿ ಹೇಳಿದ್ದಾರೆ. 

ಸ್ಮೃತಿ ಇರಾನಿ ಅವರು 2014ರಲ್ಲಿಯೂ ಇಲ್ಲಿ ರಾಹುಲ್‌ ವಿರುದ್ಧ ಸ್ಪರ್ಧಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು