ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಭಾರತಕ್ಕೆ ಮಾವು: ಹಣ್ಣುಗಳ ಸಾಗಾಣಿಕೆಗೆ ವಿಶೇಷ ರೈಲುಗಳ ವ್ಯವಸ್ಥೆ

Last Updated 26 ಏಪ್ರಿಲ್ 2020, 3:50 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್ ಕಾರಣಕ್ಕಾಗಿ ಮಾವಿನ ಹಣ್ಣುಗಳನ್ನು ಸವಿಯುವ ಅವಕಾಶಕಳೆದುಕೊಳ್ಳಲಿದ್ದ ಉತ್ತರ ಭಾರತದ ಜನರಿಗೆ ರೈಲ್ವೆ ಸಚಿವಾಲಯವು ಮಾವಿನ ಹಣ್ಣುಗಳನ್ನು ತಲುಪಿಸಲು ವಿಶೇಷ ಸರಕು ಸಾಗಾಣಿಕೆ ರೈಲುಗಳ ವ್ಯವಸ್ಥೆ ಮಾಡಿದೆ.

ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣುಗಳನ್ನು ಈ ರೈಲುಗಳ ಮೂಲಕ ತಲುಪಿಸಲಿದೆ.

ಸಾಮಾನ್ಯವಾಗಿ ಉತ್ತರ ಭಾರತಕ್ಕೆ ಏಪ್ರಿಲ್‌ ಹೊತ್ತಿಗೆ ದಕ್ಷಿಣ ರಾಜ್ಯಗಳಿಂದ ಪ್ರತಿವರ್ಷ ಮಾವಿನ ಹಣ್ಣುಗಳು ಸಾಗಣೆಯಾಗುತ್ತಿದ್ದವು. ಆದರೆ, ಈ ಬಾರಿ ಲಾಕ್‌ಡೌನ್ ಇದ್ದ ಕಾರಣ, ವ್ಯಾಪಾರಿಗಳಿಗೆ ಹಣ್ಣುಗಳನ್ನು ಟ್ರಕ್‌ಗಳ ಮೂಲಕ ತಲುಪಿಸಲು ಸಾಧ್ಯವಾಗಿಲ್ಲ. ಇದರಿಂದ ಮಾವು ಬೆಳೆಗಾರರಿಗೂ ನಷ್ಟದ ಭೀತಿ ಉಂಟಾಗಿತ್ತು. ಇದನ್ನು ಮನಗಂಡ ರೈಲ್ವೆ ಇಲಾಖೆಯು ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.

ಮಾವಿನ ಹಣ್ಣುಗಳಷ್ಟೆ ಅಲ್ಲದೆ ಬಾಳೆಹಣ್ಣು, ದ್ರಾಕ್ಷಿ, ಕಿತ್ತಳೆ, ದಾಳಿಂಬೆ ಹಣ್ಣುಗಳನ್ನೂ ವಿಶೇಷ ರೈಲುಗಳ ಮೂಲಕ ನವದೆಹಲಿ ಸೇರಿದಂತೆ ದೇಶದ ಇತರ ಮಾರುಕಟ್ಟೆಗಳಿಗೆ ತಲುಪಿಸಲಾಗಿದೆ.

‘ವಿಶೇಷ ರೈಲುಗಳ ಮೂಲಕ ಸುಮಾರು 400 ಕ್ವಿಂಟಲ್ ನಾಗ್ಪುರ ಕಿತ್ತಳೆ ಹಣ್ಣುಗಳನ್ನು ಸಾಗಣೆ ಮಾಡಲಾಗಿದೆ. ಇದರಿಂದ ದೇಶದ ವಿವಿಧ ಭಾಗಗಳ ಜನರು ನಾಗ್ಪುರದ ಕಿತ್ತಳೆ ಹಣ್ಣುಗಳನ್ನು ಸವಿಯುವಂತಾಗಿದೆ’ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಲಾಕ್‌ಡೌನ್ ಕಾರಣಕ್ಕಾಗಿ ಪ್ರಯಾಣಿಕರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಅಗತ್ಯ ಸರಕುಗಳನ್ನು ಸಾಗಿಸಲು ಸರಕು ಸಾಗಾಣಿಕೆ ರೈಲುಗಳು ಮಾತ್ರ ಸಂಚರಿಸುತ್ತಿವೆ. ಬಡವರಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆ ಮೂಲಕ ಅಕ್ಕಿ, ಗೋಧಿ ಮತ್ತು ದ್ವಿದಳ ಧಾನ್ಯಗಳನ್ನು ವಿತರಿಸಲು 55 ಅನ್ನಪೂರ್ಣಾ ರೈಲುಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ವಿಶೇಷ ರೈಲುಗಳು, ಹಣ್ಣುಗಳು ಮತ್ತು ತರಕಾರಿಗಳ ಸಾಗಾಣಿಕೆಗಾಗಿ 8 ಜೈಕಿಸಾನ್ ರೈಲುಗಳು ಸಂಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT